ಮಂಗಳವಾರ, ಸೆಪ್ಟೆಂಬರ್ 21, 2021
26 °C
ಐಸಿಜೆ ಸೂಚನೆ ಮೇರೆಗೆ ಸೇನಾ ಕಾಯ್ದೆ ತಿದ್ದುಪಡಿ ಮಾಡಲು ಪಾಕಿಸ್ತಾನ ಚಿಂತನೆ

ಮೇಲ್ಮನವಿ ಸಲ್ಲಿಸಲು ಜಾಧವ್‌ಗೆ ಅವಕಾಶ: ಕಾಯ್ದೆ ತಿದ್ದುಪಡಿಗೆ ಪಾಕಿಸ್ತಾನ ಚಿಂತನೆ

ಪಿಟಿಐ Updated:

ಅಕ್ಷರ ಗಾತ್ರ : | |

ಕುಲಭೂಷಣ್‌ ಜಾಧವ್‌ 

ಇಸ್ಲಾಮಾಬಾದ್‌: ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್‌ ಜಾಧವ್‌, ನಾಗರಿಕ ನ್ಯಾಯಾಲಯದಲ್ಲಿ ಶಿಕ್ಷೆ ಪ್ರಶ್ನಿಸಿ ಅರ್ಜಿ ಸಲ್ಲಿಸಲು ಅವಕಾಶವಾಗುವಂತೆ ಸೇನಾ ಕಾಯ್ದೆಯಲ್ಲಿ ತಿದ್ದುಪಡಿ ತರಲು ಚಿಂತನೆ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 

ಬೇಹುಗಾರಿಕೆ ಆರೋಪದಲ್ಲಿ ಭಾರತೀಯ ನೌಕಾ ಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರಿಗೆ 2017 ಏಪ್ರಿಲ್‌ನಲ್ಲಿ ಮರಣದಂಡನೆ ಶಿಕ್ಷೆಯನ್ನು ಪಾಕಿಸ್ತಾನ ಸೇನಾ ನ್ಯಾಯಾಲಯ ವಿಧಿಸಿತ್ತು. ಇದನ್ನು ನಿರಾಕರಿಸಿದ್ದ ಭಾರತ, ಜಾಧವ್‌ ನಿವೃತ್ತಿ ಬಳಿಕ ಉದ್ಯಮಿಯಾಗಿದ್ದರು. ಅವರನ್ನು ಇರಾನ್‌ನಿಂದ ಅಪಹರಿಸಲಾಗಿತ್ತು ಎಂದಿತ್ತು.

ಕುಲಭೂಷಣ್ ಜಾಧವ್ ಮೇಲೆ ಪಾಕ್‌ನಿಂದ ವಿಪರೀತ ಒತ್ತಡ: ವಿದೇಶಾಂಗ ಇಲಾಖೆ

‘ಅಂತರರಾಷ್ಟ್ರೀಯ ನ್ಯಾಯಾಲಯದ(ಐಸಿಜೆ) ಷರತ್ತಿನ ಮೇರೆಗೆ ಜಾಧವ್‌ಗೆ ಅರ್ಜಿ ಸಲ್ಲಿಸುವ ಹಕ್ಕನ್ನು ನೀಡಲು ಪಾಕಿಸ್ತಾನ ಕಾನೂನಿನ ತಿದ್ದುಪಡಿ ಮಾಡುತ್ತಿದೆ’ ಎಂದು ಮೂಲಗಳನ್ನು ಉಲ್ಲೇಖಿಸಿ ‘ಆ್ಯರಿ ನ್ಯೂಸ್‌ ಟಿವಿ’ ವರದಿ ಮಾಡಿದೆ. ಸೇನಾ ನ್ಯಾಯಾಲಯದಲ್ಲಿ ಇಂತಹ ಪ್ರಕರಣದಲ್ಲಿ ‘ಶಿಕ್ಷೆ ಪ್ರಶ್ನಿಸಿ ಅರ್ಜಿ’ ಸಲ್ಲಿಕೆ ಅವಕಾಶವನ್ನು ಸೇನಾ ಕಾಯ್ದೆ ನೀಡುವುದಿಲ್ಲ.

ಕುಲಭೂಷಣ್‌ ಜಾಧವ್‌ ಪ್ರಕರಣ: ಐಸಿಜೆಯಲ್ಲಿ ಪಾಕ್‌ಗೆ ಮುಖಭಂಗ

ಐಸಿಜೆ ನಿರ್ದೇಶನ
ಜಾಧವ್‌ಗೆ ರಾಜತಾಂತ್ರಿಕ ನೆರವನ್ನು ಪಾಕಿಸ್ತಾನ ನಿರಾಕರಿಸಿದೆ. ಈ ಮೂಲಕ ರಾಜತಾಂತ್ರಿಕ ಸಂಬಂಧಗಳ ಕುರಿತ 1963ರ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸುತ್ತಿದೆ ಎಂದು ಭಾರತ ಐಸಿಜೆಯಲ್ಲಿ ವಾದ ಮಂಡಿಸಿತ್ತು. ಜಾಧವ್‌ ಅವರಿಗೆ ವಿಧಿಸಿರುವ ಮರಣದಂಡನೆ ಶಿಕ್ಷೆಯನ್ನು ಪುನರ್‌ಪರಿಶೀಲಿಸಬೇಕು ಎಂದು ಜುಲೈ 17ರಂದು ಐಸಿಜೆ ಸೂಚಿಸಿತ್ತು. ಐಸಿಜೆ ಸೂಚನೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 2ರಂದು ಜಾಧವ್‌ ಭೇಟಿಯಾಗಲು ಭಾರತದ ಕಾನ್ಸುಲರ್‌ಗೆ ಪಾಕಿಸ್ತಾನ ಅವಕಾಶ ಕಲ್ಪಿಸಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು