ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟಿನ್ ಅಧಿಕಾರಾವಧಿ ವಿಸ್ತರಣೆಗೆ ರಷ್ಯಾ ಸಂಸತ್ತು ಅಸ್ತು

Last Updated 11 ಮಾರ್ಚ್ 2020, 21:55 IST
ಅಕ್ಷರ ಗಾತ್ರ

ಮಾಸ್:ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ ಅವರ ಈಗಿನ ಅಧಿಕಾರದ ಅವಧಿ 2024ಕ್ಕೆ ಕೊನೆಗೊಳ್ಳಲಿದೆ. ಆ ನಂತರ ಮತ್ತೆ 12 ವರ್ಷಗಳವರೆಗೆ ಅವರು ಅಧಿಕಾರದಲ್ಲಿ ಉಳಿಯಲು ಅವಕಾಶ ನೀಡುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಇಲ್ಲಿನ ಸಂಸತ್ತು ಬುಧವಾರ ಅಂಗೀಕರಿಸಿದೆ.

383 ಸಂಸದರು ಸಾಂವಿಧಾನಿಕ ಸುಧಾರಣಾ ಪ್ಯಾಕೇಜ್‌ ಪರವಾಗಿ ಮತ ಚಲಾಯಿಸಿದರು. 43 ಸಂಸದರು ಮತದಾನದಿಂದ ದೂರವುಳಿದರು.

ಸಂಸತ್ತಿನ ಕೆಳಮನೆಯು ಈ ತಿದ್ದುಪಡಿಗಳನ್ನು ಅಂಗೀಕರಿಸಿದ ಕೆಲ ಗಂಟೆಗಳ ಬಳಿಕ ಮೇಲ್ಮನೆಯೂ ಒಪ್ಪಿಗೆ ನೀಡಿದೆ. ಉದ್ದೇಶಿತ ತಿದ್ದುಪಡಿ ಬಗ್ಗೆ ಏಪ್ರಿಲ್ 22ರಂದು ದೇಶದಾದ್ಯಂತ ಸಾರ್ವತ್ರಿಕ ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT