ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿನ್ಲೆಂಡ್‌ನ ಸನ್ನಾ ಮರಿನ್‌ ವಿಶ್ವದ ಅತಿ ಕಿರಿಯ ಪ್ರಧಾನಿ

Last Updated 11 ಡಿಸೆಂಬರ್ 2019, 2:11 IST
ಅಕ್ಷರ ಗಾತ್ರ

ಹೆಲ್ಸಿಂಕಿ:ಫಿನ್ಲೆಂಡ್‌ನ ಪ್ರಧಾನಿಯಾಗಿ 34 ವರ್ಷ ವಯಸ್ಸಿನ ಸನ್ನಾ ಮರಿನ್‌ ಮಂಗಳವಾರ ಆಯ್ಕೆಯಾಗಿದ್ದಾರೆ. ಇವರು ಜಗತ್ತಿನ ಅತಿ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಸಂಸತ್ತಿನ 200 ಸದಸ್ಯರ ಪೈಕಿ 99 ಸದಸ್ಯರು ಸನ್ನಾ ಮರಿನ್‌ ನಾಮನಿರ್ದೇಶನದ ಪರವಾಗಿ ಮತ್ತು 70 ಸದಸ್ಯರು ವಿರುದ್ಧ ಮತ ಹಾಕಿದ್ದರು. ಮೂವತ್ತು ಸದಸ್ಯರು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿರಲಿಲ್ಲ.

'ಪ್ರತಿ ಮಗುವೂ ಬಯಸಿದ ಸಾಧನೆ, ಎತ್ತರಕೆ ಬೆಳೆಯಲು ಅನುವಾಗುವ ಸಮಾಜವನ್ನು ನಿರ್ಮಾಣ ಮಾಡಲು ಬಯಸುತ್ತೇನೆ. ಅಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಅತ್ಯಂತ ಗೌರವದಿಂದ ಬದುಕಿ, ಬಾಳುವರು.' ಎಂದು ಮರಿನ್‌ ಟ್ವೀಟಿಸಿದ್ದಾರೆ.

ಪ್ರಧಾನಿ ಸನಾ ಮರಿನ್‌ (ಎಡದಿಂದ ಮೂರನೆಯವರು) ಜತೆಗೆ ಇತರೆ ಸಚಿವರು
ಪ್ರಧಾನಿ ಸನಾ ಮರಿನ್‌ (ಎಡದಿಂದ ಮೂರನೆಯವರು) ಜತೆಗೆ ಇತರೆ ಸಚಿವರು

ಫಿನ್ಲೆಂಡ್‌ನಲ್ಲಿ ನಡೆದ 'ಪೋಸ್ಟಲ್‌ ಸ್ಟ್ರೈಕ್‌' ನಿರ್ವಹಣೆಯಲ್ಲಿ ಸರ್ಕಾರ ಎಡವಿದೆ ಎಂದು ಮೈತ್ರಿ ಪಕ್ಷ ಸೆಂಟ್ರೆ ಪಾರ್ಟಿ ಅವಿಶ್ವಾಸ ಮಂಡಿಸಿದ ಪರಿಣಾಮ ಸೋಶಿಯಲ್‌ ಡೆಮೊಕ್ರಾಟ್‌ನ ಪ್ರಧಾನಿ ಅಂಟಿ ರಿನೆ ಕೆಳದವಾರ ರಾಜೀನಾಮೆ ನೀಡಿದ್ದರು. ಸಂಸತ್ತಿನ ಅನುಮೋದನೆಯ ಬಳಿಕ ಫಿನ್ಲೆಂಡ್‌ನ ಅಧ್ಯಕ್ಷರು ಮರಿನ್‌ ಅವರ ಐದು ಮೈತ್ರಿ ಪಕ್ಷಗಳ ಸಂಪುಟಕ್ಕೆ ನಾಮನಿರ್ದೇಶನ ಮಾಡಲಿದ್ದಾರೆ. ಸಂಪುಟವು 12 ಮಂದಿ ಮಹಿಳಾ ಸಚಿವರು ಮತ್ತು 7 ಮಂದಿ ಪುರುಷ ಸಚಿವರನ್ನು ಒಳಗೊಂಡಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT