ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ. ಆಫ್ರಿಕಾ: ಭಾರತದ ನರ್ಸ್‌ಗಳಿಗೆ ಬೇಡಿಕೆ

Last Updated 22 ಫೆಬ್ರುವರಿ 2020, 23:06 IST
ಅಕ್ಷರ ಗಾತ್ರ

ಜೋಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದಲ್ಲಿ 47 ಸಾವಿರ ನರ್ಸ್‌ಗಳ ಕೊರತೆ ಇದೆ ಎಂಬುದನ್ನು 2018ರ ಉದ್ಯೋಗ ಸಮೀಕ್ಷೆ
ಬಹಿರಂಗಪಡಿಸಿತ್ತು.

ಹೆಚ್ಚಿನ ಸಂಬಳ ಲಭಿಸುವ ಕಾರಣಕ್ಕೆ ನುರಿತ ನರ್ಸ್‌ಗಳು ಕೆಲಸಕ್ಕಾಗಿ ಬ್ರಿಟನ್‌, ಯುಎಇ, ಸೌದಿ ಅರೇಬಿಯಾ ಅಥವಾ ನ್ಯೂಜಿಲೆಂಡ್‌ ದೇಶಗಳಿಗೆ ತೆರಳುತ್ತಿದ್ದಾರೆ. ಇದರಿಂದ ದಕ್ಷಿಣ ಆಫ್ರಿಕಾದಲ್ಲಿ ನರ್ಸ್‌ಗಳ ಕೊರತೆ ಎದುರಾಗಿದೆ ಎಂದು ಪತ್ರಿಕೆಯು ವರದಿಯಲ್ಲಿ ಉಲ್ಲೇಖಿಸಿದೆ.

ಈ ವರ್ಷ ಭಾರತದ 150 ನರ್ಸ್‌ಗಳನ್ನು ನೇಮಕ ಮಾಡಿಕೊಳ್ಳುವುದಾಗಿ ದಕ್ಷಿಣ ಆಫ್ರಿಕಾದ ಅತಿ ದೊಡ್ಡ ಆಸ್ಪತ್ರೆ ಸಮೂಹ ಮೆಡಿಕ್ಲಿನಿಕ್‌ ಹೇಳಿದೆ.

2005ರಿಂದಲೇ ಮೆಡಿಕ್ಲಿನಿಕ್‌, ಭಾರತದ ನರ್ಸ್‌ಗಳನ್ನು ನೇಮಕ ಮಾಡಿಕೊಳ್ಳಲು ಆರಂಭಿಸಿದೆ. ಆದರೆ ಭಾರತದ ಎಷ್ಟು ಮಂದಿ ನರ್ಸ್‌ಗಳನ್ನು ಈವರೆಗೆ ನೇಮಕ ಮಾಡಿಕೊಳ್ಳಲಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ.

2008 ಮತ್ತು 2014ರ ನಡುವೆ ಭಾರತದ 135 ಮಂದಿ ನರ್ಸ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ದಕ್ಷಿಣ ಆಫ್ರಿಕಾದ ಲೈಫ್‌ ಹೆಲ್ತ್‌ಕೇರ್‌ ಆಸ್ಪತ್ರೆ ಸಮೂಹ ತಿಳಿಸಿರುವುದಾಗಿ ಪತ್ರಿಕೆ ಹೇಳಿದೆ.

‘ಭಾರತದ ನರ್ಸ್‌ಗಳು ಶ್ರಮ ಜೀವಿಗಳು. ರೋಗಿಗಳ ಜೊತೆ ಸಂಯಮದಿಂದ ವರ್ತಿಸುತ್ತಾರೆ. ಆದರೆ ಕುಟುಂಬದ ಬದ್ಧತೆ ಇರುವುದರಿಂದ ಅವರು ಅಲ್ಪಾವಧಿಯ ಗುತ್ತಿಗೆ ಮೇಲೆ ಕೆಲಸಕ್ಕೆ ಬರುತ್ತಾರೆ’ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT