ಭಾನುವಾರ, ಫೆಬ್ರವರಿ 23, 2020
19 °C

ಸ್ಪೇನ್‌ನಿಂದ 119 ವಲಸಿಗರ ರಕ್ಷಣೆ

ಎಪಿ Updated:

ಅಕ್ಷರ ಗಾತ್ರ : | |

ಮ್ಯಾಡ್ರಿಡ್‌: ಮೆಡಿಟರೇನಿಯನ್‌ ಸಮುದ್ರದ ಮೂಲಕ ಯುರೋಪ್‌ ಪ್ರವೇಶಿಸುತ್ತಿದ್ದ ದೋಣಿಯೊಂದು ಕಾಣೆಯಾಗಿದ್ದು, ದೋಣಿಯಲ್ಲಿದ್ದ 119 ವಲಸಿಗರನ್ನು ಸ್ಪೇನ್‌ ರಕ್ಷಿಸಿದೆ. ಉಳಿದ 67 ಮಂದಿಯ ಶೋಧ ಕಾರ್ಯ ಮುಂದುವರಿದಿದೆ.

‘ದೋಣಿಯ ರಕ್ಷಣಾ ಕಾರ್ಯವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಶೋಧ ಕಾರ್ಯವು ಮಂಗಳವಾರ ಪುನರಾರಂಭಗೊಳ್ಳಲಿದೆ’ ಎಂದು ಸ್ಪೇನ್‌ನ ಕಡಲ ರಕ್ಷಣಾ ಸಂಸ್ಥೆಯ ವಕ್ತಾರರು ಹೇಳಿದರು.

ಮತ್ತೊಂದೆಡೆ, ಅಲ್ಬೋರ್ನ್‌ ಸಮುದ್ರ ಪ್ರದೇಶದಲ್ಲಿ ಎರಡು ರಬ್ಬರ್‌ ದೋಣಿಗಳು ಸಿಕ್ಕಿದ್ದು, 119 ಮಂದಿ ಅದರಲ್ಲಿದ್ದರು. ಮಲಾಗ ನಗರವನ್ನು ಈ ಎರಡು ದೋಣಿಗಳು ತಲುಪಿವೆ. ಈ ವಲಸಿಗರಲ್ಲಿ 26 ಮಹಿಳೆಯರು ಮತ್ತು ಐವರು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)