ಮಂಗಳವಾರ, ಫೆಬ್ರವರಿ 18, 2020
29 °C

ಸ್ವಿಟ್ಜರ್ಲೆಂಡ್‌ನಲ್ಲಿದೆ ವಿಶ್ವದ ಚಿಕ್ಕ ಚಿನ್ನದ ನಾಣ್ಯ!

ಎಪಿ Updated:

ಅಕ್ಷರ ಗಾತ್ರ : | |

Prajavani

ಬರ್ಲಿನ್: ಸ್ವಿಟ್ಜರ್ಲೆಂಡ್‌ನಲ್ಲಿ ಅತಿ ಚಿಕ್ಕದಾದ ಚಿನ್ನದ ನಾಣ್ಯ ಬಿಡುಗಡೆ ಮಾಡಲಾಗಿದೆ. ಭೌತವಿಜ್ಞಾನಿ ಆಲ್ಬರ್ಟ್‌ ಐನ್‌ಸ್ಟೀನ್‌ ಅವರ ಚಿತ್ರ ಇದರಲ್ಲಿದೆ. ಅತಿ ಸಮೀಪದಿಂದ ನೋಡಿದರಷ್ಟೆ ಈ ಚಿತ್ರ ಕಾಣುತ್ತದೆ.

ನಾಣ್ಯ 2.96 ಮಿ.ಮೀ. ಸುತ್ತಳತೆ ಹೊಂದಿದ್ದು, ಜಗತ್ತಿನಲ್ಲಿಯೇ ಅತಿ ಚಿಕ್ಕ ನಾಣ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸರ್ಕಾರಿ ಸ್ವಾಮ್ಯದ ನೋಟು ಮುದ್ರಣ ಘಟಕ ಸ್ವಿಸ್‌ಮಿಂಟ್‌ ತಿಳಿಸಿದೆ.

ನಾಣ್ಯ ಕೇವಲ 0.063 ಗ್ರಾಂ ತೂಕವಿದೆ. ಇದರ ಮೌಲ್ಯ ಸ್ವಿಟ್ಜರ್ಲೆಂಡ್‌ನ 0.25 ಸ್ವಿಸ್ ಫ್ರಾಂಕ್‌ (₹18.55). ಕೇವಲ 999 ನಾಣ್ಯಗಳನ್ನು ಮಾತ್ರ ಟಂಕಿಸಲಾಗಿದ್ದು, 199 ಫ್ರಾಂಕ್‌ಗಳಿಗೆ ಮಾರಲಾಗುವುದು ಎಂದು ಸ್ವಿಸ್‌ಮಿಂಟ್‌ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು