ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಂಗ್‌ಕಾಂಗ್‌: ಸತತ ಮೂರನೇ ದಿನ ಘರ್ಷಣೆ

Last Updated 26 ಡಿಸೆಂಬರ್ 2019, 19:54 IST
ಅಕ್ಷರ ಗಾತ್ರ

ಹಾಂಗ್‌ಕಾಂಗ್‌ : ಕ್ರಿಸ್‌ಮಸ್‌ಹಬ್ಬದ ಸಂದರ್ಭದಲ್ಲೂ ಹಾಂಗ್‌ಕಾಂಗ್‌ನಲ್ಲಿ ಘರ್ಷಣೆ ಮುಂದುವರಿದಿದೆ. ಶಾಪಿಂಗ್‌ ಮಾಲ್‌ ಒಳಗೆ ಪೊಲೀಸರು ಹಾಗೂ ಪ್ರಜಾಪ್ರಭುತ್ವ ಪರ ಪ್ರತಿಭಟನೆಕಾರರನಡುವೆ ಗುರುವಾರ ಘರ್ಷಣೆ ನಡೆದಿದೆ.

ಗುರುವಾರ ಮಧ್ಯಾಹ್ನ ಪ್ರತಿಭಟನಕಾರರು ಮಾಲ್‌ ಒಳಗಡೆ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಿದ್ದರು. ಪೆಪ್ಪರ್‌ ಸ್ಪ್ರೇ ಹಾಗೂ ನೀಲಿ ಇಂಕ್‌ ಸಿಡಿಸುವ ಮೂಲಕ ಪ್ರತಿಭಟನಕಾರರನ್ನುಗುರುತಿಸಿದ ಪೊಲೀಸರು, ಅವರನ್ನು ಬಂಧಿಸಿದರು. ಇತ್ತೀಚೆಗೆ ಮಾಲ್‌ಗಳೇ ಪ್ರತಿಭಟನೆಗಳಿಗೆ ವೇದಿಕೆಯಾಗುತ್ತಿವೆ. ಈ ಮೂಲಕ ಆರ್ಥಿಕ ಚಟುವಟಿಕೆಯನ್ನು ಅಡ್ಡಿಪಡಿಸಲು ಪ್ರತಿಭಟನಕಾರರು
ಪ್ರಯತ್ನಿಸುತ್ತಿದ್ದಾರೆ.

ಆರು ತಿಂಗಳುಗಳಿಂದ ಹಾಂಗ್‌ಕಾಂಗ್‌ನಲ್ಲಿ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಪ್ರಜಾಪ್ರಭುತ್ವ ಪರ ಸದಸ್ಯರು ಸ್ಥಳೀಯ ಚುನಾವಣೆಗಳಲ್ಲಿ ವಿಜೇತರಾದ ಕಾರಣ, ಕಳೆದಒಂದು ತಿಂಗಳಿನಿಂದ ಈಚೆಗೆ ಪ್ರತಿಭಟನೆಗಳು ಕಡಿಮೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT