ಗ್ವಾಟೆಮಾಲ ಸಿಟಿ: ಇಲ್ಲಿನ ಫ್ಯುಗೋ ಅಗ್ನಿಪರ್ವತದಲ್ಲಿ ಮತ್ತೆ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಸುಮಾರು 4,000 ಜನರನ್ನು ಸರ್ಕಾರ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದೆ.
ಸೋಮವಾರ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಭಾರಿ ಪ್ರಮಾಣದಲ್ಲಿ ಲಾವಾರಸ ಮತ್ತು ಬೂದಿ ಪರ್ವತದಿಂದ ಕೆಳಕ್ಕೆ ಇಳಿದಿದೆ.
ಮುಂಜಾಗ್ರತಾ ಕ್ರಮವಾಗಿ ಸ್ಥಳೀಯರನ್ನು ಎಸ್ಕುಂಟಿಲಾದಲ್ಲಿನ ಕ್ರೀಡಾಂಗಣದಲ್ಲಿ ಟೆಂಟ್‌ಗಳನ್ನು ನಿರ್ಮಿಸಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಜೂನ್‌ನಲ್ಲಿ ಸಂಭವಿಸಿದ ಜ್ವಾಲಾಮುಖಿ ಸ್ಪೋಟದಿಂದ 200 ಜನ ಮೃತಪಟ್ಟು, 235 ಜನ ನಾಪತ್ತೆಯಾಗಿದ್ದರು. ಈ ಅವಘಡ ಇನ್ನೂ ಹಸಿಯಾಗಿರುವಾಗಲೇ ಈ ವರ್ಷ ಐದನೇ ಬಾರಿಗೆ ಮತ್ತೊಮ್ಮೆ ಜ್ವಾಲಾಮುಖಿ ಸ್ಫೋಟವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.