ಬಾಸ್ಟನ್/ನವದೆಹಲಿ: ಕೋವಿಡ್–19ಗೆ ಸಂಬಂಧಿಸಿದಂತೆ ಕೈಗೊಂಡಿದ್ದ ಎರಡು ಅಧ್ಯಯನ ಕುರಿತು ದಿ ಲಾನ್ಸೆಟ್ ಹಾಗೂ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ನಲ್ಲಿ (ಎನ್ಇಜೆಎಂ) ತಾವು ಪ್ರಕಟಸಿದ್ದ ವಿವಾದಿತ ಅಧ್ಯಯನ ವರದಿಗಳನ್ನು ವಿಜ್ಞಾನಿಗಳು ಹಿಂಪಡೆದಿದ್ದಾರೆ.

‘ಅಮೆರಿಕ ಇಲಿನಾಯ್ನಲ್ಲಿರುವ ‘ಸರ್ಜಿಸ್ಪಿಯರ್ ಕಾರ್ಪೊರೇಷನ್‘ ಕಂಪನಿಯ ದತ್ತಾಂಶದ ಆಧಾರದ ಮೇಲೆ ಕೋವಿಡ್–19 ಕುರಿತ ವಿಶ್ಲೇಷಣಾತ್ಮಕ ವರದಿಯನ್ನು ಪ್ರಕಟಿಸಲಾಗಿತ್ತು. ಆದರೆ, ಈ ಕಂಪನಿ ತಾನು ಒದಗಿಸಿದ್ದ ದತ್ತಾಂಶಗಳ ಸತ್ಯಾಸತ್ಯತೆಯನ್ನು ದೃಢಪಡಿಸದ ಕಾರಣ ಈ ವರದಿಗಳನ್ನು ಹಿಂಪಡೆಯಲಾಗುತ್ತಿದೆ’ ಎಂದು ವಿಜ್ಞಾನಿ ಮಂದೀಪ್ ಮೆಹ್ರಾ ಹೇಳಿದ್ದಾರೆ.

ಮೆಹ್ರಾ ಅವರು ಅಮೆರಿಕದಲ್ಲಿ ಹಾರ್ವರ್ಡ್ ಮೆಡಿಕಲ್ ಸ್ಕೂಲ್ನಲ್ಲಿ ವಿಜ್ಞಾನಿ. ‘ಸರ್ಜಿಸ್ಪಿಯರ್ ಕಾರ್ಪೊರೇಷನ್‘ನ ಸಿಇಒ ಸಪನ್ ದೇಸಾಯಿ ಅವರೊಡಗೂಡಿ ಮೆಹ್ರಾ ಈ ವರದಿಗಳನ್ನು ಪ್ರಕಟಿಸಿದ್ದರು.

‘ಆರು ಖಂಡಗಳ ವಿವಿಧ ದೇಶಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ 96 ಸಾವಿರ ಕೋವಿಡ್ ರೋಗಿಗಳಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಲಾಗಿದೆ. ಈ ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೊಕ್ವಿನ್ (ಎಚ್ಸಿಕ್ಯು) ಹಾಗೂ ಕ್ಲೋರೊಕ್ವಿನ್ ಔಷಧಿ ನೀಡಲಾಗಿತ್ತು. ಇದರಿಂದಾಗಿ ರೋಗಿಗಳ ಹೃದಯಬಡಿತ ಏರುಪೇರಾಗಿತ್ತು. ಸಾವಿನ ಸಂಖ್ಯೆಯೂ ಹೆಚ್ಚಿತ್ತು’ ಎಂಬ ವರದಿ ದಿ ಲಾನ್ಸೆಟ್ ಜರ್ನಲ್ನಲ್ಲಿ ಮೇ 22ರಂದು ಪ್ರಕಟವಾಗಿತ್ತು.

ಮೇ 1ರಂದು ಎನ್ಇಜೆಎಂನಲ್ಲಿ ಪ್ರಕಟವಾಗಿದ್ದ ವರದಿಯಲ್ಲಿ, ‘ಹೃದಯ ಕಾಯಿಲೆ ಇರುವ ವ್ಯಕ್ತಿಯಲ್ಲಿ ಕೋವಿಡ್–19 ಕಾಣಿಸಿಕೊಂಡರೆ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ’ ಎಂದು ವಿವರಿಸಲಾಗಿತ್ತು. ಈ ಎರಡೂ ವರದಿಗಳಿಗೆ ಆಕ್ಷೇಪಿಸಿ ವಿವಿಧ ದೇಶಗಳ ನೂರಕ್ಕೂ ಹೆಚ್ಚು ವಿಜ್ಞಾನಿಗಳು ಆಯಾ ನಿಯತಕಾಲಿಕೆಗಳಿಗೆ ಪತ್ರ ಬರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.