ಶುಕ್ರವಾರ, ಜೂಲೈ 3, 2020
22 °C

ವಿಶ್ವಸಂಸ್ಥೆ ಭದ್ರತಾ ಮಂಡಳಿ ಚುನಾವಣೆ 17ರಂದು

ಪಿಟಿಐ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಚುನಾವಣೆಯು ಹೊಸ ಮತದಾನದ ವ್ಯವಸ್ಥೆಯೊಂದಿಗೆ ಈ ತಿಂಗಳ 17ರಂದು ನಡೆಯಲಿದೆ. ಅಂತರ ಕಾಯ್ದುಕೊಳ್ಳಬೇಕೆಂಬ ಮಾರ್ಗದರ್ಶಿ ಸೂಚಿಗೆ ಅನುಗುಣವಾಗಿ ಇಲ್ಲಿನ ಸಾಮಾನ್ಯ ಸಭೆಯ ಸಭಾಂಗಣದಲ್ಲಿ ಪ್ರತಿ ಸದಸ್ಯ ರಾಷ್ಟ್ರವು ತನ್ನ ಮತ ಚಲಾಯಿಸಲಿದೆ ಎಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯ (ಯುಎನ್‌ಜಿಎ) ಅಧ್ಯಕ್ಷ ತಿಜ್ಜಾನಿ ಮಹಮ್ಮದ್‌ ಬಾಂದೆ ಹೇಳಿದ್ದಾರೆ.

ಭದ್ರತಾ ಮಂಡಳಿಯ ಕಾಯಂ ಅಲ್ಲದ ಐದು ಸದಸ್ಯತ್ವ ಸ್ಥಾನಗಳಿಗೆ, ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ಸದಸ್ಯತ್ವಕ್ಕೆ  ಹಾಗೂ ಯುಎನ್‌ಜಿಎದ 75ನೇ ಅಧಿವೇಶನದ ಅಧ್ಯಕ್ಷ ಸ್ಥಾನಕ್ಕೆ ಅಂದು ಏಕಕಾಲದಲ್ಲಿ ಚುನಾವಣೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. 

ಏಷ್ಯಾ– ಪೆಸಿಫಿಕ್‌ ವರ್ಗದಲ್ಲಿ ಕಾಯಂ ಅಲ್ಲದ ಸದಸ್ಯತ್ವ ಪಡೆಯಲು ಭಾರತ ಕೂಡ ಕಣದಲ್ಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು