ಪಾಕ್‌ಗೆ ಸೇನಾ ನೆರವು ಸ್ಥಗಿತಗೊಳಿಸಲು ಅಮೆರಿಕ ನಿರ್ಧಾರ

7

ಪಾಕ್‌ಗೆ ಸೇನಾ ನೆರವು ಸ್ಥಗಿತಗೊಳಿಸಲು ಅಮೆರಿಕ ನಿರ್ಧಾರ

Published:
Updated:

ವಾಷಿಂಗ್ಟನ್: ಉಗ್ರರ ನಿಗ್ರಹದ ವಿಚಾರದಲ್ಲಿ ಪಾಕಿಸ್ತಾನದ ಪ್ರಯತ್ನ ನಿರಾಶಾದಾಯಕವಾಗಿದೆ ಎಂಬ ಕಾರಣಕ್ಕೆ, ₹2,130 ಕೋಟಿ ಸೇನಾ ನೆರವನ್ನು ರದ್ದುಗೊಳಿಸಲು ಅಮೆರಿಕ ನಿರ್ಧರಿಸಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಳೆದ ವರ್ಷ ಪ್ರಕಟಿಸಿರುವ ದಕ್ಷಿಣ ಏಷ್ಯಾ ನೀತಿಯನ್ನು ಬೆಂಬಲಿಸಲು ಮತ್ತು ಹಕ್ಕಾನಿ ಕಾರ್ಯಜಾಲ, ಲಷ್ಕರ್‌– ಎ– ತಯ್ಯಬದಂತಹ ಭಯೋತ್ಪಾದಕ ಗುಂಪುಗಳನ್ನು ನಿಗ್ರಹಿಸುವಲ್ಲಿ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಲು
ಪಾಕಿಸ್ತಾನ ವಿಫಲವಾಗಿದೆ ಎಂದು ಪೆಂಟಗನ್‌ ಹೇಳಿದೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪೊಂಪಿಯೊ ಅವರು ನೂತನ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ತೆರಳಲಿರುವ ಕೆಲವೇ ದಿನಗಳ ಮುನ್ನ ಈ ಹೇಳಿಕೆ ಹೊರಬಿದ್ದಿದೆ.

ಬರಹ ಇಷ್ಟವಾಯಿತೆ?

 • 2

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !