ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಮೊದಲ ಜಾಗತಿಕ ಯುದ್ಧದಲ್ಲಿ ಮೃತರಾದವರಿಗಿಂತ ಹೆಚ್ಚು ಜನ ಕೋವಿಡ್‌ಗೆ ಸಾವು

Last Updated 17 ಜೂನ್ 2020, 8:13 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಮೊದಲ ಜಾಗತಿಕ ಯುದ್ಧದಲ್ಲಿ ಮಡಿದ ಅಮೆರಿಕ ಸೇನೆಯ ಸಿಬ್ಬಂದಿಗಿಂತ ಹೆಚ್ಚು ಜನರು ಈಗ ಈ ದೇಶದಲ್ಲಿ ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ.

ಮೊದಲ ಜಾಗತಿಕ ಯುದ್ಧದಲ್ಲಿ ಸೈನಿಕರು ಸೇರಿದಂತೆ 1,16,516 ಜನರು ಮೃತಪಟ್ಟಿದ್ದರು. ಕೋವಿಡ್‌ನಿಂದಾಗಿ ಮೃತಪಟ್ಟವರ ಸಂಖ್ಯೆ 1,16,526 ಎಂದು ಜಾನ್ಸ್‌ ಹಾಪ್‌ಕಿನ್ಸ್‌ ಯುನಿವರ್ಸಿಟಿಯ ಅಂಕಿ–ಅಂಶಗಳು ಹೇಳುತ್ತವೆ.

ಈ ಅಂಕಿ–ಸಂಖ್ಯೆಗಳೇ ನಿಖರ ಎನ್ನಲಾಗದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಮೊದಲ ಜಾಗತಿಕ ಯುದ್ಧದಲ್ಲಿ ಮೃತಪಟ್ಟವರು ಎಷ್ಟು ಜನ ಎಂಬುದನ್ನು ಎಣಿಕೆ ಮಾಡುವುದು ಆಗ ದೊಡ್ಡ ಸವಾಲೇ ಆಗಿತ್ತು. ಆದರೆ, ಇತಿಹಾಸಕಾರರು ಮತ್ತು ಸಂಸತ್‌ನ ಸಂಶೋಧನಾ ಸೇವಾ ವಿಭಾಗದ ಲೆಕ್ಕಾಚಾರದ ಪ್ರಕಾರ ಸತ್ತವರ ಸಂಖ್ಯೆ 1,16,516.

ಈಗ ವ್ಯಾಪಕವಾಗಿ ಕೋವಿಡ್‌ ಪರೀಕ್ಷೆ ನಡೆಸುವುದೂ ಸವಾಲಿನ ಕೆಲಸವೇ ಆಗಿದೆ. ಹೀಗಾಗಿ ಈಗಲೂ ಕೋವಿಡ್‌ನಿಂದಾಗಿಯೇ ಮೃತರ ಸಂಖ್ಯೆ ಎಷ್ಟು ಎಂಬುದನ್ನು ನಿಖರವಾಗಿ ಹೇಳಲಾಗದು ಎಂದು ಮೂಲಗಳು ಹೇಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT