ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ಪರಿಸ್ಥಿತಿ: ಅಮೆರಿಕ ಸಂಸದರ ಕಳವಳ

Last Updated 13 ಸೆಪ್ಟೆಂಬರ್ 2019, 20:40 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಕಾಶ್ಮೀರದಲ್ಲಿ ಕಲಂ 370ರನ್ನು ರದ್ದುಗೊಳಿಸಿದ ನಂತರ, ಅಲ್ಲಿನ ಸಂವಹನ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದೆ. ಇದನ್ನು ಪುನಃ ಸ್ಥಾಪಿಸಬೇಕು ಹಾಗೂ ವಶದಲ್ಲಿಟ್ಟುಕೊಂಡಿರುವವರನ್ನು ಬಿಡುಗಡೆಗೊಳಿಸಲು ಭಾರತದ ಮೇಲೆ ಒತ್ತಡ ಹೇರಬೇಕು ಎಂದು ಅಮೆರಿಕದ ಕೆಲವು ಪ್ರಭಾವಿ ಸಂಸದರು ಅಧ್ಯಕ್ಷ ಟ್ರಂಪ್‌ ಅವರನ್ನು ಮನವಿ ಮಾಡಿದ್ದಾರೆ.

ಕಾಶ್ಮೀರದ ಮಾನವ ಹಕ್ಕುಗಳ ಕುರಿತೂ ಸಂಸದರು ಕಳವಳ ವ್ಯಕ್ತಪಡಿಸಿದ್ದಾರೆ. ದಿನ ಕಳೆದಂತೆ ಕಾಶ್ಮೀರದ ಜನರ ಪರಿಸ್ಥಿತಿ ಹೆಚ್ಚು ಕಷ್ಟಕರವಾಗುತ್ತಿದೆ ಎಂದು ಸಂಸದರು ಟ್ರಂಪ್‌ ಅವರಿಗೆ ‍ಪತ್ರ ಬರೆದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನ ರದ್ದತಿಯಿಂದ ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷವನ್ನು ಹೆಚ್ಚಿಸಿದಂತೆ ಆಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT