ಕೊಲಂಬಿಯಾ: ಅನ್ವೇಷಕ, ನಾವಿಕ ಕ್ರಿಸ್ಟೋಫರ್ ಕೊಲಂಬಸ್ ಅವರ ಹೆಸರನ್ನೇ ಇಟ್ಟಿದ್ದ ಈ ನಗರದಲ್ಲಿದ್ದ ಅವರ ಪ್ರತಿಮೆಯನ್ನು ಸುರಕ್ಷತಾ ದೃಷ್ಟಿಯಿಂದ ತೆಗೆದು ಪ್ರತ್ಯೇಕವಾಗಿ ಇರಿಸಲಾಗಿದೆ. ಒಂದು ವಾರದಲ್ಲಿ ಅನೇಕ ಬಾರಿ ಪ್ರತಿಮೆ ಮೇಲೆ ದಾಳಿ ನಡೆದಿದ್ದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಸೌತ್ ಕರೊಲಿನಾದ ರಿವರ್‌ಫ್ರಂಟ್ ಪಾರ್ಕ್‌ನಲ್ಲಿರುವ ಪ್ರತಿಮೆಯನ್ನು ಶುಕ್ರವಾರದ ವೇಳೆಗೆ ಭಾಗಶಃ ಜಖಂಗೊಳಿಸಲಾಗಿತ್ತು. ‘ಪ್ರತಿಮೆಯನ್ನು ತೆಗೆದಿರಿಸಲಾಗಿದೆ. ನಗರಸಭೆ ಸದಸ್ಯರು, ಅಧಿಕಾರಿಗಳು ಮುಂದಿನ ಕ್ರಮದ ಬಗ್ಗೆ ಚರ್ಚಿಸುವರು’ ಎಂದುಮೇಯರ್ ಸ್ಟೀವ್ ಬೆಂಜಮಿನ್ ಪ್ರತಿಕ್ರಿಯಿಸಿದ್ದಾರೆ.

‘ಪ್ರತಿಭಟನಕಾರರು ರಾತ್ರಿಯ ಹೊತ್ತು ಪ್ರತಿಮೆಯನ್ನು ಧ್ವಂಸಗೊಳಿಸಬೇಕು ಎಂದು ನಾನು ಬಯಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಉತ್ತರ ಅಮೆರಿಕಕ್ಕೆ 1492ರಲ್ಲಿ ಕೊಲಂಬಸ್‌ಬಂದಿದ್ದ. ಅಮೆರಿಕದ ವಿವಿಧ ನಗರಗಳಲ್ಲಿ ಆತನಪ್ರತಿಮೆಗಳನ್ನು ಈಗಾಗಲೇ ಪ್ರತಿಭಟನಾಕಾರರು ನಾಶಗೊಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.