ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವಿಶ್ವಸುಂದರಿ ಸಮಾಜಸೇವಕಿಯೂ ಹೌದು

ವಿಶ್ವಸುಂದರಿ ಕಿರೀಟ ತೊಟ್ಟ ಮೆಕ್ಸಿಕೊದ ವನೆಸ್ಸಾ ಪೊನ್ಸ್ ಡಿ ಲಿಯಾನ್‌
Last Updated 9 ಡಿಸೆಂಬರ್ 2018, 2:08 IST
ಅಕ್ಷರ ಗಾತ್ರ

ಸಾನ್ಯಾ (ಚೀನಾ): ಕಳೆದ ಬಾರಿ ವಿಶ್ವಸುಂದರಿಯಾಗಿ ಆಯ್ಕೆಯಾಗಿದ್ದ ಭಾರತದ ಮಾನುಷಿ ಛಿಲ್ಲರ್ ಶನಿವಾರ ಮೆಕ್ಸಿಕೊದ ವನೆಸ್ಸಾ ಪೊನ್ಸ್ ಡಿ ಲಿಯಾನ್‌ ಅವರಿಗೆ ವಿಶ್ವಸುಂದರಿ ಕಿರೀಟ ತೊಡಿಸಿದರು. ಮೊದಲ ರನ್ನರ್ ಅಪ್ ಶ್ರೇಯ ಥಾಯ್ಲೆಂಡ್‌ ಪಾಲಾದರೆ ಮಿಸ್ ಇಂಡಿಯಾ ಅನುಕೀರ್ತಿ ವಾಸ್ ಅವರಿಗೆಮೊದಲ 30 ಮಂದಿಯ ಪಟ್ಟಿಯಲ್ಲಿ ಸ್ಥಾನ ಪಡೆಯಲು ಮಾತ್ರ ಸಾಧ್ಯವಾಯಿತು.

ಮಿಸ್‌ ವರ್ಲ್ಡ್‌ ವನೆಸ್ಸಾ ಕಣ್ಣಲ್ಲಿ ಖುಷಿಯ ಕಣ್ಣೀರು...
ಮಿಸ್‌ ವರ್ಲ್ಡ್‌ ವನೆಸ್ಸಾ ಕಣ್ಣಲ್ಲಿ ಖುಷಿಯ ಕಣ್ಣೀರು...

‘ನನಗೆ ನಂಬಲು ಆಗ್ತಿಲ್ಲ, ನಿಜವಾಗ್ಲೂ ನನಗೆ ನಂಬೋಕೆ ಆಗ್ತಿಲ್ಲ. ಜಗತ್ತಿನಲ್ಲಿರುವ ಎಲ್ಲ ಹುಡುಗಿಯರೂ ಈ ಗೌರವಕ್ಕ ಅರ್ಹರು. ಅವರೆಲ್ಲನ್ನೂ ಪ್ರತಿನಿಧಿಸಲು ನನಗೆ ಸಂತೋಷವಾಗ್ತಿದೆ. ನನಗೆ ಸಿಗುವ ಸಮಯದಲ್ಲಿ ನಾನು ಏನೆಲ್ಲಾ ಮಾಡಲು ಸಾಧ್ಯವೋ ಅದೆಲ್ಲವನ್ನೂ ಮಾಡುತ್ತೇನೆ. ಎಲ್ಲರಿಗೂ ಧನ್ಯವಾದಗಳು’ ಎಂದು ವಿಶ್ವಸುಂದರಿಯಾಗಿ ಆಯ್ಕೆಯಾದ ನಂತರವನಿಸ್ಸಾ ಭಾವುಕರಾಗಿ ನುಡಿದರು.

ವನೆಸ್ಸಾಗೆ ವಿಶ್ವಸುಂದರಿ ಕಿರೀಟ ತೊಡಿಸಿದ ಮಾನುಷಿ ಛಿಲ್ಲರ್
ವನೆಸ್ಸಾಗೆ ವಿಶ್ವಸುಂದರಿ ಕಿರೀಟ ತೊಡಿಸಿದ ಮಾನುಷಿ ಛಿಲ್ಲರ್

ಮಿಸ್‌ ವರ್ಲ್ಡ್‌ ಕಿರೀಟ ತೊಡಿಸುವಾಗ ಮಾನುಷಿ ಅವರಿಗೆ ವನೆಸ್ಸಾ ಭಾರತೀಯ ಶೈಲಿಯಲ್ಲಿ ಕೈಮುಗಿದು‘ನಮಸ್ತೆ’ ಎಂದರು. ಗೆಲುವಿನ ಮುಗುಳ್ನಗೆಯೊಂದಿಗೆ ಬೀಗುತ್ತಿದ್ದ ವನೆಸ್ಸಾ ಅವರೊಂದಿಗೆ ವೇದಿಕೆಯಲ್ಲಿ ಹೆಜ್ಜೆಹಾಕಿದ ಮಾನುಷಿ ಸಭಿಕರತ್ತ ಕೈಬೀಸಿದರು. ನಂತರ ಇತರ ಸ್ಪರ್ಧಿಗಳೊಂದಿಗೆ ವನೆಸ್ಸಾ ಮತ್ತು ಮಾನುಷಿ ಡಾನ್ಸ್‌ ಮಾಡಿರಂಜಿಸಿದರು.

ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಪದವಿ ಪಡೆದಿರುವ ವನೆಸ್ಸಾ ಪ್ರಸ್ತುತ ಬಾಲಕಿಯರ ಪುನರ್ವಸತಿ ಕೇಂದ್ರವೊಂದರ ನಿರ್ದೇಶಕಿಯಾಗಿದ್ದಾರೆ. ವಲಸಿಗರ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸುವ ‘ಮೈಗ್ರೆಂಟ್ಸ್ ಎನ್‌ ಎಲ್ ಕಾಮಿನೊ’ ಸಂಸ್ಥೆಯಲ್ಲಿ ಸ್ವಯಂಸೇವಕಿಯಾಗಿ ದುಡಿಯುತ್ತಿದ್ದಾರೆ. ವೃತ್ತಿಪರ ಮಾಡೆಲ್ ಮತ್ತು ನಿರೂಪಕಿಯಾಗಿರುವ ವನೆಸ್ಸಾ ರಾಷ್ಟ್ರೀಯ ಯುವ ಸಂಸ್ಥೆಯಲ್ಲಿ ಉಪನ್ಯಾಸಕಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಹಸ್ಪರ್ಧಿಗಳಿಂದ ಅಭಿನಂದನೆ
ಸಹಸ್ಪರ್ಧಿಗಳಿಂದ ಅಭಿನಂದನೆ

ಸಾಹಸ ಕ್ರೀಡೆಗಳು ವನೆಸ್ಸಾಗೆ ಅಚ್ಚುಮೆಚ್ಚು.ಸ್ಕೂಬಾ ಡೈವಿಂಗ್, ವಾಲೀಬಾಲ್, ಚಿತ್ರಕಲೆಯಲ್ಲಿ ಪರಿಶ್ರಮವಿದೆ. ಮುಕ್ತ ಮಾತುಕತೆ, ತಿರುಗಾಟ ನನಗೆ ಅಚ್ಚುಮೆಚ್ಚು ಎಂದು ಹೇಳಿಕೊಳ್ಳುತ್ತಾರೆ.

ಥಾಯ್ಲೆಂಡ್‌ನ ನಿಕೊಲೆನೆ ಪಿಚಪಾ ಲಿಮ್ಸ್‌ನುಕನ್ ಎರಡನೇ ಸ್ಥಾನ ಪಡೆದರು. ಬೆಲರುಸ್, ಜಮೈಕಾ ಮತ್ತು ಉಗಾಂಡಾದ ಸುಂದರಿಯರು ನಂತರದ ಸ್ಥಾನ ಗಳಿಸಿದರು.

ಭಾರತದ ಅನುಕೀರ್ತಿ ವಾಸ್‌ಗೆ ವಿಶ್ವಸುಂದರಿ ಕಿರೀಟ ಸಿಗಬಹುದು ಎಂಬು ಭಾರತೀಯರು ನಿರೀಕ್ಷಿಸಿದ್ದರು. ಆದರೆ ತಿರುಚಿರಾಪಳ್ಳಿಯ ಈ ಚೆಲುವೆ ಟಾಪ್ 30ಕ್ಕೆ ತಲುಪಿದರೂ, ಟಾಪ್ 12ರೊಳಗೆ ಸ್ಥಾನಪಡೆಯಲು ವಿಫಲರಾದರು. ಒಟ್ಟು 118 ಸ್ಪರ್ಧಿಗಳು ಈ ಬಾರಿ ವಿಶ್ವಸುಂದಿಯಾಗುವ ಕನಸು ಹೊತ್ತು ಸ್ಪರ್ಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT