ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಿಂದ ಇರಾನ್‌ ಕಮಾಂಡರ್‌ ಹತ್ಯೆ; ಭಾರತದ ಮೇಲೆ ಏನೆಲ್ಲ ಪರಿಣಾಮ?

Last Updated 3 ಜನವರಿ 2020, 12:52 IST
ಅಕ್ಷರ ಗಾತ್ರ

ನವದೆಹಲಿ:ಇರಾನ್‌ನ ಕಮಾಂಡರ್‌ ಖಾಸಿಂ ಸೊಲೈಮನಿ ಹತ್ಯೆ ಬಳಿಕ ಅಮೆರಿಕ ಮತ್ತು ಇರಾನ್‌ ನಡುವೆ ಸೃಷ್ಟಿಯಾಗಿರುವ ಬಿಗುವಿನ ವಾತಾವರಣವು ಉದ್ಯೋಗ, ವ್ಯಾಪಾರದ ಕಾರಣಗಳಿಂದ ಮಧ್ಯಪ್ರಾಚ್ಯದಲ್ಲಿ ನೆಲೆಸಿರುವ ಸುಮಾರು 80 ಲಕ್ಷ ಭಾರತೀಯರ ಮೇಲೂ ಪರಿಣಾಮ ಬೀರಬಹುದಾಗಿದೆ ಎಂದು ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಜಗತ್ತಿನ ಹಲವು ರಾಷ್ಟ್ರಗಳ ಮೇಲೆಅಮೆರಿಕ–ಇರಾನ್‌ ನಡುವಿನ ತಿಕ್ಕಾಟದ ಪರಿಣಾಮ ಬೀರಬಹುದಾಗಿದ್ದು, ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯ ಹಾಗೂ ಬೆಲೆ ಏರಿಕೆಗೆ ಕಾರಣವಾಗಲಿದೆ. ಜತೆಗೆ ಮಧ್ಯ ಪ್ರಾಚ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 80 ಲಕ್ಷ ಭಾರತೀಯರು ತೊಂದರೆ ಸಿಲುಕಲಿದ್ದಾರೆ.

ಪಶ್ಚಿಮ ಏಷ್ಯಾ ಭಾಗದಲ್ಲಿ ಭಾರತೀಯರುಕಾರ್ಯನಿರ್ವಹಣೆಯಿಂದ ಗಳಿಸುತ್ತಿರುವ ಆದಾಯದಲ್ಲಿ ಸುಮಾರು ₹ 2.87 ಲಕ್ಷಕೋಟಿ (40 ಬಿಲಿಯನ್‌ ಡಾಲರ್‌) ಭಾರತಕ್ಕೆ ರವಾನೆಯಾಗುತ್ತಿದೆ.ಅಮೆರಿಕ–ಇರಾನ್‌ ಬಿಕ್ಕಟ್ಟು ಭಾರತಕ್ಕೆ ಹರಿದು ಬರುವಹಣಕ್ಕೆ ಅಡ್ಡಿ ಉಂಟು ಮಾಡಲಿದೆ. ಅಮೆರಿಕದ ಡ್ರೋನ್‌ ಕಾರ್ಯಾಚರಣೆಯಲ್ಲಿ ಇರಾನ್‌ ಕಮಾಂಡರ್‌ ಸೊಲೈಮನಿ ಹತ್ಯೆಯಾದ ಸುದ್ದಿ ಹೊರಬರುತ್ತಿದ್ದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಶೇ 4ರಷ್ಟು ಹೆಚ್ಚಳವಾಗಿದೆ. ಇದರಿಂದ ಭಾರತದಲ್ಲಿ ಕೆಲವು ದಿನಗಳ ವರೆಗೆ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ.

ಇರಾನ್‌ ಸ್ವಾಮ್ಯದ ತೈಲ ಸಂಗ್ರಹಗಳ ಮೇಲೆ ಅಮೆರಿಕ ದಾಳಿ ನಡೆಸಬಹುದೆಂಬ ಆತಂಕವೂ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಇದರಿಂದ ಭಾರತದ ಇಂಧನ ಪೂರೈಕೆಯ ಮೇಲೂ ಹೊರೆಯಾಗಲಿದೆ. ಬಿಕ್ಕಟ್ಟು ಹೆಚ್ಚಿದರೆ ಚಾಬಹಾರ್‌ ಬಂದರು ಯೋಜನೆಗೂಅಡ್ಡಿಯಾಗಬಹುದೆಂದು ವಿಶ್ಲೇಷಿಸಲಾಗಿದೆ.

ಚಾಬಹಾರ್‌: ಭಾರತ, ಇರಾನ್‌ ಮತ್ತು ಅಫ್ಗಾನಿಸ್ತಾನ್‌ ಜಂಟಿಯಾಗಿ ಚಾಬಹಾರ್‌ ಬಂದರು ಅಭಿವೃದ್ಧಿಪಡಿಸಿವೆ. ಮಧ್ಯ ಏಷ್ಯಾ ರಾಷ್ಟ್ರಗಳೊಂದಿಗೆ ವ್ಯಾಪಾರಕ್ಕೆ ಈ ಮೂರು ದೇಶಗಳಿಗೆ ಸುವರ್ಣಾವಕಾಶಗಳ ಹೆಬ್ಬಾಗಿಲು ಎಂದು ಪರಿಗಣಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT