ಶನಿವಾರ, ಫೆಬ್ರವರಿ 22, 2020
19 °C

ಯೆಮನ್‌: ಕ್ಷಿಪಣಿ, ಡ್ರೋನ್‌ ದಾಳಿಗೆ 70 ಯೋಧರ ಸಾವು

ಎಎಫ್‌ಪಿ Updated:

ಅಕ್ಷರ ಗಾತ್ರ : | |

ದುಬೈ: ಕೇಂದ್ರ ಪ್ರಾಂತ್ಯದ ಮಾರಿಬ್‌ನ ಮಸೀದಿ ಮೇಲೆ ಹುತಿ ಬಂಡುಕೋರರು ನಡೆಸಿದ ಕ್ಷಿಪಣಿ ಮತ್ತು ಡ್ರೋನ್‌ ದಾಳಿಯಲ್ಲಿ 70ಕ್ಕೂ ಹೆಚ್ಚು ಯೆಮನ್‌ ಯೋಧರು ಬಲಿಯಾಗಿದ್ದಾರೆ ಎಂದು ವೈದ್ಯಕೀಯ ಮತ್ತು ಮಿಲಿಟರಿ ಮೂಲಗಳು ಭಾನುವಾರ ತಿಳಿಸಿವೆ.

ಯೆಮನ್‌ ರಾಜಧಾನಿ ಸನಾದ ಪೂರ್ವಕ್ಕೆ ಸುಮಾರು 170 ಕಿ.ಮೀ ದೂರದಲ್ಲಿರುವ ಮಾರಿಬ್‌ನ ಮಿಲಿಟರಿ ಕ್ಯಾಂಪ್‌ನ ಮಸೀದಿ ಮೇಲೆ ಹುತಿಗಳು ಸಂಜೆ ಪ್ರಾರ್ಥನೆಯ ಸಮಯದಲ್ಲಿ ಈ ದಾಳಿ ನಡೆದಿಸಿದ್ದಾರೆ ಎಂದು ಮಿಲಿಟರಿ ಮೂಲಗಳು ಹೇಳಿವೆ.

ಈ ದಾಳಿಯಲ್ಲಿ 70ಕ್ಕೂ ಹೆಚ್ಚು ಯೋಧರು ಸತ್ತಿದ್ದು, 50ಕ್ಕೂ ಹೆಚ್ಚು ಯೋಧರಿಗೆ ಗಾಯಗಳಾಗಿವೆ ಎಂದು ವೈದ್ಯಕೀಯ ಮೂಲಗಳು ಮಾಹಿತಿ ನೀಡಿವೆ. ‌ಮಸೀದಿ ಮೇಲಿನ ಹುತಿ ಬಂಡುಕೋರರ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಯೆಮನ್‌ ಅಧ್ಯಕ್ಷ ಅಬೆದ್ರಾಬ್ಬೊ ಮನ್ಸೂರ್ ಹಾಡಿ ಇದು ‘ಹೇಡಿತನ ಮತ್ತು ಭಯೋತ್ಪಾದಕ’ ದಾಳಿ ಎಂದಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು