ಭಾನುವಾರ, ಆಗಸ್ಟ್ 1, 2021
27 °C
ಶಿವಮೊಗ್ಗ ಕಾರ್ಯಕರ್ತೆ ಅನ್ನಪೂರ್ಣ ಹೆಸರು ಉಲ್ಲೇಖ

ಕೋವಿಡ್‌–19: ರಾಜ್ಯದ ಆಶಾ ಕಾರ್ಯಕರ್ತೆಯರ ಶ್ರಮಕ್ಕೆ ಕೇಂದ್ರದಿಂದ ಶಹಭಾಸ್‌ಗಿರಿ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ಆಶಾ ಕಾರ್ಯಕರ್ತೆಯರು ಮುಂಚೂಣಿಯಲ್ಲಿದ್ದು ರಾಜ್ಯದ ಆಶಾ ಕಾರ್ಯಕರ್ತೆಯರ ಶ್ರಮಕ್ಕೆ ಕೇಂದ್ರ ಸರ್ಕಾರ ಶಹಭಾಸ್‌ಗಿರಿ ಕೊಟ್ಟಿದೆ.

ಶಿವಮೊಗ್ಗದ ಆಶಾ ಕಾರ್ಯಕರ್ತೆ ಅನ್ನಪೂರ್ಣ ಎಂಬುವರು ಕೊಳಗೇರಿಯ 3000 ಜನರನ್ನು ಭೇಟಿ ಮಾಡಿ ಅವರ ಆರೋಗ್ಯ ತಪಾಸಣೆ ಸೇರಿದಂತೆ ಕೋವಿಡ್‌–19 ಕುರಿತಾಗಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ ಎಂದು ಕೇಂದ್ರ ಸರ್ಕಾರ ಅನ್ನಪೂರ್ಣ ಅವರ ಹೆಸರನ್ನು ಉಲ್ಲೇಖ ಮಾಡಿ ಟ್ವೀಟ್‌ ಮಾಡಿದೆ.

42 ಸಾವಿರ ಆಶಾ ಕಾರ್ಯಕರ್ತೆಯರು 1.59 ಕೋಟಿ ಮನೆಗಳಿಗೆ ತೆರಳಿ ಕೊರೊನಾ ವೈರಸ್‌ ಕುರಿತಂತೆ ಸರ್ವೆ ಮಾಡಿದ್ದಾರೆ. ಅಂತರರಾಜ್ಯ ಪ್ರಯಾಣಿಕರು, ವಲಸೆ ಕಾರ್ಮಿಕರು ಹಾಗೂ ಕೋವಿಡ್‌–19 ಲಕ್ಷಣ ಇರುವವರನ್ನು ತಪಾಸಣೆ ಮಾಡಿದ್ದಾರೆ ಎಂದು ಭಾರತ ಸರ್ಕಾರ ತಿಳಿಸಿದೆ.

ಜೀವದ ಹಂಗು ತೊರೆದು, ಅಪಾಯದ ಸ್ಥಿತಿಯಲ್ಲಿರುವ ಸಮುದಾಯ ಅಥವಾ ಜನರನ್ನು ನಿಯಮಿತವಾಗಿ ಭೇಟಿ ಮಾಡುವುದು ಹಾಗೂ ಕಂಟೈನ್‌ಮೆಂಟ್‌ ಝೋನ್‌ಗಳಿಗೆ ನಿತ್ಯ ಭೇಟಿ ಕೊಡುವ ಮೂಲಕ ಕೋವಿಡ್‌–19 ವಿರುದ್ಧ ಹೋರಾಟದಲ್ಲಿ ಸಕ್ರಿಯರಾಗಿದ್ದಾರೆ ಎಂದು ಕೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದೆ.

ಸೋಂಕಿತರ ಮಾಹಿತಿ ಕಲೆ ಹಾಕುವುದು, ಸೋಂಕಿನ ಲಕ್ಷಣಗಳು ಇರುವವರ ಮಾಹಿತಿಯನ್ನು ವೈದ್ಯರಿಗೆ ರವಾನಿಸುವುದು ಸೇರಿದಂತೆ ಆರೋಗ್ಯ ಕಾಳಜಿ ಹಾಗೂ ಸಮುದಾಯದಲ್ಲಿ ಕೋವಿಡ್‌–19 ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ಶಹಭಾಸ್‌ಗಿರಿ ಕೊಟ್ಟಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು