ಗುರುವಾರ , ಜುಲೈ 29, 2021
25 °C
ತಾಲ್ಲೂಕಿನ ಮಹಜನದಹಳ್ಳಿ ಗ್ರಾಮದ ಕೃಷಿ ಕುಟುಂಬದ ವಿದ್ಯಾರ್ಥಿ

ಹೂವಿನಹಡಗಲಿ: ಇಂದು ಕಾಲೇಜಿನ ಕರೆಗೌಡ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಕೊಟ್ಟೂರು: ಈ ಬಾರಿಯು ದ್ವಿತೀಯ ಪಿಯುಸಿ ಫಲಿತಾಂಶದ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಇಲ್ಲಿನ ಇಂದು ಪಿಯು ಕಾಲೇಜು ಸತತ ಆರನೇ ಬಾರಿಯು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಕರೆಗೌಡ ಬಸವನಗೌಡ್ರು 594 ಅಂಕಗಳಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ, ಮೂಲತಃ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮಹಜನದಹಳ್ಳಿಯ ಕೃಷಿಕ ಕೊಟ್ರೇಶ, ಶಾಂತಮ್ಮ ದಂಪತಿಯ ಪುತ್ರ.

ನಿತ್ಯ 4-5 ತಾಸು ಓದುತ್ತ ಇದ್ದೆ, ಜತೆಗೆ ತರಗತಿಗಳಲ್ಲಿ ಮನನಃವಾಗುವಂತೆ ಪೂರ್ವಸಿದ್ಧತಾ ಪರಿಕ್ಷೆಗಳ ಜತೆಗೆ ಶಿಕ್ಷಕರು ತರಗತಿ ಕೊಡುತ್ತಿದ್ದರು. ಐಐಎಸ್ ಮಾಡುವ ಕನಸಿದೆ, ಪರಿಸ್ಥಿತಿ ಸರಿ ಇಲ್ಲದ ಕಾರಣ ಸರ್ಕಾರಿ ಉದ್ಯೋಗದ ನಿರಿಕ್ಷೆಯಲ್ಲಿದ್ದೇನೆ, ಉದ್ಯೋಗ ಸಿಕ್ಕರೆ ಉದ್ಯೋಗದ ಜತೆಗೆ ಓದುತ್ತೇನೆ ಎಂದು ಕರೆಗೌಡ ದಾಸನಗೌಡ್ರು ಹೇಳಿದರು.

ಮಗ ಪ್ರಥಮ ರ್ಯಾಂಕ್ ಬಂದಿರುವುದು ಖುಷಿ ತಂದಿದೆ, ಅವನು ಉದ್ಯೋಗ ಮಾಡುತ್ತಾನೆ ಎನ್ನುತ್ತಾನೆ ಉದ್ಯೋಗ ಬೇಡ ವಿದ್ಯಾಭ್ಯಾಸ ಮುಂದುವರೆಸಲಿ ಮದು ಕರೆಗೌಡ ಅವರ ತಂದೆ ಕೊಟ್ರೇಶ ಅವರ ಅಭಿಪ್ರಾಯ.

ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಕರ ಪರಿಶ್ರಮದ ಜತೆ ವಿದ್ಯಾರ್ಥಿಗಳ ಪ್ರಾಥಮಿಕ‌,ಪ್ರೌಢ ಶಿಕ್ಷಣ ಉತ್ತಮವಾಗಿದ್ದು ಜತೆಗೆ ನಮ್ಮ ತಂಡದ ಪರಿಶ್ರಮ ಇದೆ ಎನ್ನುತ್ತಾರೆ ಪ್ರಾಂಶುಪಾಲ ಎಚ್.ಎನ್.ವೀರಭದ್ರಪ್ಪ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು