ಗುರುವಾರ , ಅಕ್ಟೋಬರ್ 1, 2020
22 °C

ಅಮಿತ್‌ ಶಾ, ಸಿದ್ದರಾಮಯ್ಯಗೆ ಕೊರೊನಾ: ವ್ಯಂಗ್ಯ ಮಾಡಿದ ಸಂದೇಶ ವೈರಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಹೆಸರಿನ ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ವ್ಯಂಗ್ಯ ಮಾಡಿರುವ ಸಂದೇಶ ವೈರಲ್‌ ಆಗಿದೆ.

ಅಮಿತ್‌ ಶಾ ಅವರಿಗೆ ಕೋವಿಡ್‌–19 ತಗುಲಿರುವ ಹಿನ್ನೆಲೆಯಲ್ಲಿ ಈ ಸಂದೇಶವನ್ನು ಪೋಸ್ಟ್‌ ಮಾಡಲಾಗಿದ್ದು, ‘ಶಾಸಕರ ಖರೀದಿ ಕೇಂದ್ರವನ್ನು 14 ದಿನಗಳವರೆಗೆ ಮುಚ್ಚಲಾಗಿದೆ. ಮ್ಯಾನೇಜರ್‌ಗೆ ಕೊರೊನಾ ಪಾಸಿಟಿವ್‌ ಕಂಡುಬಂದಿರುವ ಕಾರಣ. ಹೀಗಾಗಿ ಯಾವುದೇ ಅನ್ಯಪಕ್ಷದ ಶಾಸಕರು ಸಂಪರ್ಕಿಸಬಾರದೆಂದು ಕೋರುತ್ತೇನೆ’ ಎಂದು ಉಲ್ಲೇಖಿಸಲಾಗಿದೆ.

ಇದಕ್ಕೆ ಪ್ರತಿಯಾಗಿ ಮತ್ತೊಬ್ಬರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ಸಂದೇಶ ಪೋಸ್ಟ್‌ ಮಾಡಿದ್ದಾರೆ.

‘ಅದೇ ರೀತಿ ನಿದ್ದೆರಾಮಯ್ಯನವರನ್ನೂ ಯಾವುದೇ ಕಾರ್ಯಕ್ರಮಕ್ಕೆ ಕರಿಯಬೇಡಿ. 14 ದಿನಗಳವರೆಗೆ ಅಮಿತ್‌ ಶಾ ಸೂಪರ್ ಬೆಡ್ ಕೊಡಿಸಿದ್ದಾರೆ. 14 ದಿನದವರೆಗೆ ನಿದ್ದೆ ಮಾಡುವುದೇ ನನ್ನ ಕೆಲಸ ಅಭಿಮಾನಿಗಳು ಸಹಕರಿಸಬೇಕಾಗಿ ವಿನಂತಿ ಇಂತಿ– ಗುಲಾಮ’ ಎಂದು ಬರೆಯಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು