ಮಂಗಳವಾರ, ಸೆಪ್ಟೆಂಬರ್ 22, 2020
25 °C

ವಿವಿಧೆಡೆ ವಿದ್ಯುತ್ ವ್ಯತ್ಯಯ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ 11 ಕೆ.ವಿ. ಮಿಲ್ಲತ್‍ನಗರ ಹಾಗೂ ದುಬೈ ಕಾಲೊನಿ ಫೀಡರ್‌ಗಳ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯಕೈಗೊಂಡಿರುವ ಪ್ರಯುಕ್ತ ಜುಲೈ 28ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಮಿಲ್ಲತ್‍ ನಗರ ಫೀಡರ್: ಮಿಲ್ಲತ್‌ ನಗರ, ಬುಲಂದ ಪರ್ವೇಜ್, ಖಾಜಾ ಕಾಲೊನಿ, ಧನಗರ್ ಗಲ್ಲಿ, ಖಮರ್ ಕಾಲೊನಿ, ನೋರಾನಿ ಮೊಹಲ್ಲಾ, ಇಸ್ಲಾಮಾಬಾದ್, ಸಯ್ಯದ್‌ ಗಲ್ಲಿ, ಕಾಲಾ ಹೋಡಾ, ರೋಜಾ ಮಾರ್ಕೆಟ್, ಕೆ.ಬಿ.ಎನ್. ಇಂಜಿನಿಯರ್ ಕಾಲೇಜ್, ಕೆ.ಸಿ.ಟಿ. ಎಂಜಿನಿಯರಿಂಗ್‌ ಕಾಲೇಜ್‌ ಹಾಗೂ ಸುತ್ತಮುತ್ತಲ್ಲಿನ ಪ್ರದೇಶಗಳು.

ದುಬೈ ಕಾಲೊನಿ ಫೀಡರ್: ಎಂ.ಜಿ.ಟಿ.ಟಿ., ಆಶ್ರಯ ಕಾಲೊನಿ, ದುಬೈ ಕಾಲೊನಿ ಶೇಖ ರೋಜಾ ಜಿಡಿಎ, ಕಸ್ತೂರಿ ನಗರ, ಸ್ವಾರ್ಗೆಟ್ ನಗರ ಮತ್ತು ಸುತ್ತಮುತ್ತಲ್ಲಿನ ಪ್ರದೇಶಗಳು.

ಆಸ್ತಿ ತೆರಿಗೆ ಪಾವತಿಸಿದರೆ ರಿಯಾಯಿತಿ

ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳ ಚಾಲ್ತಿ ವರ್ಷದ (2020-21ನೇ ಸಾಲಿಗಾಗಿ) ಆಸ್ತಿ ತೆರಿಗೆ ಪಾವತಿ ಮೇಲೆ ಶೇ 5ರ ರಿಯಾಯಿತಿ ಸೌಲಭ್ಯ ಪಡೆಯಲು  ಜುಲೈ 31ರವರೆಗೆ ಅವಕಾಶ ನೀಡಲಾಗಿದೆ.

ಈ ರಿಯಾಯಿತಿ ಸೌಲಭ್ಯಕ್ಕೆ ಈಗ ಕೇವಲ 4 ದಿನ ಮಾತ್ರ ಬಾಕಿ ಉಳಿದಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಾಲಿಕೆಯ (ಕಂ) ಉಪ ಆಯುಕ್ತ ಪ್ರಕಾಶ ಸಿ. ಹರಕುಡೆ ತಿಳಿಸಿದ್ದಾರೆ.

ಅದೇ ರೀತಿ ವಿಳಂಬದ ದಂಡವನ್ನು 2020 ಜುಲೈ 1ರಿಂದ ಅನ್ವಯಿಸುವ ಬದಲಾಗಿ 2020ರ ನವೆಂಬರ್ 1ರಿಂದ ಅನ್ವಯವಾಗುವಂತೆ ದಂಡವನ್ನು ವಿಧಿಸಲಾಗುತ್ತದೆ. ಈ ಅವಕಾಶ ಕೇವಲ 2020-21ನೇ ಸಾಲಿಗಾಗಿ ಮಾತ್ರ ಅನ್ವಯಿಸುತ್ತದೆ.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಕಲಬುರಗಿ ಮಹಾನಗರ ಪಾಲಿಕೆಯ http://kalaburagicitycorp.org ಈ ವೆಬ್‍ಸೈಟ್‍ನಲ್ಲಿ ಆಸ್ತಿ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಇದಲ್ಲದೇ ಪಾಲಿಕೆಯ ನೆಲಮಹಡಿಯ ಎರಡನೇ ಅಂತಸ್ತಿನ ಆವರಣದಲ್ಲಿ ಹಾಗೂ ನಗರದಲ್ಲಿರುವ ಗುಲಬರ್ಗಾ ಒನ್ ಕೇಂದ್ರಗಳಲ್ಲಿ ತೆರಿಗೆ ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.