ಪಬ್‌ಜಿ ಆಡುತ್ತಿದ್ದ 10 ಜನರ ಬಂಧನ

ಶನಿವಾರ, ಮಾರ್ಚ್ 23, 2019
31 °C

ಪಬ್‌ಜಿ ಆಡುತ್ತಿದ್ದ 10 ಜನರ ಬಂಧನ

Published:
Updated:

ಅಹಮದಾಬಾದ್: ಇಲ್ಲಿನ ರಾಜ್‌ಕೋಟ್‌ ನಗರದಲ್ಲಿ ಪಬ್‌ಜಿ ಗೇಮ್‌ ಆಡುತ್ತಿದ್ದ ಆರು ವಿದ್ಯಾರ್ಥಿಗಳು ಸೇರಿ 10 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಗುಜರಾತ್‌ನಲ್ಲಿ ಪಬ್‌ಜಿ ಹಾಗೂ ಮೊಮೊ ಚಾಲೆಂಜ್‌ ಮೊಬೈಲ್‌ ಗೇಮ್‌ ಆಡುವುದನ್ನು ಮಾರ್ಚ್‌ 6ರಿಂದ ನಿಷೇಧಿಸಲಾಗಿದೆ.

ಆದರೂ ಇನ್ನೂ ಈ ಗೇಮ್‌ಗಳನ್ನು ಆಡುತ್ತಿರುವವರನ್ನು ಬಂಧಿಸುವಂತೆ ರಾಜ್‌ಕೋಟ್‌ ತಾಲ್ಲೂಕು ಪೊಲೀಸ್‌ ಇನ್‌ಸ್ಪೆಕ್ಟರ್‌ ವಿ.ಎಸ್‌. ವನ್ಝಾರ ತಿಳಿಸಿದ್ದಾರೆ.

ಕಲವಾಡ ರಸ್ತೆ ಹಾಗೂ ಜಗನ್ನಾಥ ಚೌಕ ಪ್ರದೇಶದಲ್ಲಿ ಪಬ್‌ಜಿ ಆಡುತ್ತಿದ್ದ ಆರು ಕಾಲೇಜು ವಿದ್ಯಾರ್ಥಿಗಳು, ಗಾಂಧಿಗ್ರಾಮ ಪೊಲೀಸ್‌ ಠಾಣಾ ಪ್ರದೇಶದಲ್ಲಿ ಖಾಸಗಿ ಉದ್ಯೋಗಿಯೊಬ್ಬ, ರಾಜ್‌ಕೋಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮೂವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಬ್‌ಜಿ, ಮೊಮೊ ಚಾಲೆಂಚ್‌ ಗೇಮ್‌ಗಳನ್ನು ಆಡುವವರಲ್ಲಿ ಹಿಂಸಾತ್ಮಕ ನಡವಳಿಕೆ ಹೆಚ್ಚಿದ್ದರಿಂದ ಇಂತಹ ಮೊಬೈಲ್‌ ಗೇಮ್‌ಗಳಿಗೆ ನಿಷೇಧ ಹೇರಲಾಗಿದೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !