ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈ ಶ್ರೀರಾಮ್‌ ಹೇಳುವಂತೆ ಮೌಲ್ವಿಗೆ ಒತ್ತಾಯ: ಪ್ರಕರಣ ದಾಖಲು

Last Updated 14 ಜುಲೈ 2019, 20:01 IST
ಅಕ್ಷರ ಗಾತ್ರ

ಭಾಗ್‌ಪತ್‌: ಮೌಲ್ವಿಯೊಬ್ಬರ ಗಡ್ಡವನ್ನು ಎಳೆದು ‘ಜೈ ಶ್ರೀರಾಮ್‌’ ಹೇಳುವಂತೆ ಒತ್ತಾಯಿಸಿದ ಆರೋಪದಡಿ 12 ಯುವಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಮೇಲ್ನೋಟಕ್ಕೆ ಇದೊಂದು ದೈಹಿಕ ಹಲ್ಲೆ ಎಂದು ತಿಳಿದುಬರುತ್ತಿದೆ. ಮೌಲ್ವಿ ಇಮಾಮ್‌ ಇಮ್ಲಕ್‌ ಉರ್‌ ರೆೆಹೆಮಾನ್‌ ಅವರ ದೂರಿನ ಅನ್ವಯ 12 ಯುವಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತನಿಖೆ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದು ಎಸ್‌ಪಿ ಶೈಲೇಶ್‌ ಕುಮಾರ್‌ ಪಾಂಡೆ ಭಾನುವಾರ ಹೇಳಿದರು.

ಮುಜಫರ್‌ನಗರದ ನಿವಾಸಿ ಇಮಾಮ್‌ ಅವರು, ಶನಿವಾರ ತಮ್ಮ ಹಳ್ಳಿಗೆ ತೆರಳುತ್ತಿದ್ದರು. ಈ ವೇಳೆ ಅಡ್ಡಗಟ್ಟಿದ ಯುವಕರು, ಹೊಡೆದು, ಅವರ ಗಡ್ಡವನ್ನು ಎಳೆದಿದ್ದಾರೆ. ನಂತರ, ಅವರಿಗೆ ಜೈ ಶ್ರೀರಾಮ್‌ ಎಂದು ಹೇಳುವಂತೆ ಒತ್ತಾಯಿಸಿದ್ದಾರೆ ಎಂದು ಇಮಾನ್‌ ಆರೋಪಿಸಿದ್ದಾರೆ ಎಂದು ಎಸ್‌ಪಿ ಮಾಹಿತಿ ನೀಡಿದರು.

ಘಟನೆಯ ವೇಳೆ ಇಮಾಮ್‌ ಕೂಗಿಕೊಂಡಾಗ, ಅವರ ಹಳ್ಳಿಯ ಇಬ್ಬರು ಅವರನ್ನು ರಕ್ಷಿಸಿದ್ದಾರೆ ಎಂದು ಅವರು ಹೇಳಿದರು.

‘ನಿನ್ನ ಗಡ್ಡ ಬೊಳಿಸಿಕೊಂಡ ಬಳಿಕವಷ್ಟೇ ನೀನು ಹಳ್ಳಿಗೆ ಬರಬೇಕು’ ಎಂದು ಯುವಕರು ಹೇಳಿದ್ದಾರೆ ಎಂದು ಇಮಾಮ್‌ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT