ಮಂಗಳವಾರ, ಫೆಬ್ರವರಿ 18, 2020
27 °C

ಬಾಲಕಿ ಮೇಲೆ ಅತ್ಯಾಚಾರ: ಇಬ್ಬರಿಗೆ ಶಿಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಇಬ್ಬರು ಅಪರಾಧಿಗಳನ್ನು ಪೋಕ್ಸೊ ನ್ಯಾಯಾಲಯ ಶನಿವಾರ ಶಿಕ್ಷೆಗೆ ಗುರಿಪಡಿಸಿದೆ. ಇದೇ 30 ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿದೆ. 

2013ರ ಏಪ್ರಿಲ್‌ 15 ರಂದು ಪೂರ್ವ ದೆಹಲಿಯ ಗಾಂಧಿ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು.

ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ನರೇಶ್‌ ಕುಮಾರ್‌ ಮಲ್ಹೋತ್ರಾ ಅವರು, ಅಪರಾಧಿಗಳಾದ ಮನೋಜ್‌ ಶಾ ಮತ್ತು ಪ್ರದೀಪ್‌ ಕುಮಾರ್‌ ಅವರನ್ನು ಶಿಕ್ಷೆಗೊಳಪಡಿಸಿದ್ದಾರೆ. 

‘ವಿಚಾರಣೆಯು ಎರಡು ವರ್ಷಗಳಲ್ಲಿ ಪೂರ್ಣಗೊಂಡರೂ ಆರು ವರ್ಷಗಳ ನಂತರ ನಮಗೆ ನ್ಯಾಯ ದೊರೆತಿರುವುದು ಸಂತೋಷವಾಗಿದೆ.  ನನ್ನ ಮಗಳಿಗೆ ಕೊನೆಗೂ ನ್ಯಾಯ ಸಿಕ್ಕಿದೆ’ ಎಂದು ಬಾಲಕಿಯ ತಂದೆ ಹೇಳಿದ್ದಾರೆ.

ತಲೆಮರೆಸಿಕೊಂಡಿದ್ದ ಅಪರಾಧಿಗಳನ್ನು 2013ರಲ್ಲಿಯೇ ಬಂಧಿಸಲಾಗಿತ್ತು. ಅದೇ ವರ್ಷದ ಮೇ 24 ರಂದು ಚಾರ್ಜ್‌ಶೀಟ್‌ ಸಲ್ಲಿಸಲಾಗಿತ್ತು.

ಹಲ್ಲೆ: ಅತ್ಯಾಚಾರ ಪ್ರಕರಣದ ಇಬ್ಬರು ಅಪರಾಧಿಗಳಲ್ಲೊಬ್ಬ ಮಾಧ್ಯಮದ ಕೆಲವರ ಮೇಲೆ ಶನಿವಾರ ಹಲ್ಲೆ ನಡೆಸಿದ್ದಾನೆ. ಅಪರಾಧಿ ಮನೋಜ್‌ ಶಾ, ನ್ಯಾಯಾಲಯದಿಂದ ಹೊರಗೆ ಬರುತ್ತಿದ್ದಂತೆ ಹಿರಿಯ ವರದಿಗಾರರ ಮೇಲೆ ಹಲ್ಲೆ ನಡೆಸಿದ್ದಾನೆ. ನ್ಯಾಯಾಧೀಶ ನರೇಶ್‌ ಕುಮಾರ್‌ ಮಲ್ಹೋತ್ರಾ ಅವರು, ಈ ಕುರಿತು ಲಿಖಿತ ದೂರು ನಿಡುವಂತೆ ಹಿರಿಯ ಮಹಿಳಾ ವರದಿಗಾರರಿಗೆ ಸೂಚಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು