ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ‌| ಕೊಳವೆಬಾವಿಗೆ ಬಿದ್ದಿದ್ದ 3 ವರ್ಷದ ಬಾಲಕ ಸಾವು 

Last Updated 28 ಮೇ 2020, 6:29 IST
ಅಕ್ಷರ ಗಾತ್ರ

ಮೇಡಕ್‌: ತೆಲಂಗಾಣದ ಮೇಡಕ್ ಜಿಲ್ಲೆಯಲ್ಲಿ ತೆರೆದ ಕೊಳವೆ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದ ಮೂರು ವರ್ಷದ ಬಾಲಕ ಸಂಜಯ್‌ ಸಾಯ್‌ ವರ್ಧನ್‌ ಮೃತಪಟ್ಟಿದ್ದಾನೆ.

ಬುಧವಾರ ಸಂಜೆ ತನ್ನ ಅಜ್ಜ ಮತ್ತು ಅಪ್ಪನೊಂದಿಗೆ ಹೊಲದಲ್ಲಿ ಆಟವಾಡುತ್ತಿದ್ದ ಸಂಜಯ್‌ 120 ಅಡಿ ಆಡಳದ ಕೊಳವೆ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದ.

ಸುಮಾರು 10 ಗಂಟೆಗಳ ಕಾರ್ಯಾಚರಣೆಯ ನಂತರ ಗುರುವಾರ ಮುಂಜಾನೆ ಸಂಜಯ್‌ ಮೃತದೇಹವನ್ನು ಎನ್‌ಡಿಆರ್‌ಆರ್‌ ತಂಡ ಕೊಳವೆ ಬಾವಿಯಿಂದ ಹೊರ ತೆಗೆದಿದೆ.

‘ಹೊರತೆಗೆಯುವ ಮೊದಲೇ ಮಗು ಮೃತಪಟ್ಟಿತ್ತು. ಮಗುವಿನ ಮೇಲೆ ಮಣ್ಣು ಬಿದ್ದಿದ್ದರಿಂದ ಆಮ್ಲಜನಕ ಪೂರೈಕೆಯಾಗದೇ ಮೃತಪಟ್ಟಿದೆ,’ ಎಂದು ಮೇಡಕ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದನಾ ದೀಪ್ತಿ ತಿಳಿಸಿದ್ದಾರೆ.

ಬಾಲಕನ ಕುಟುಂಬ ಇತ್ತೀಚೆಗಷ್ಟೇ ಹೊಲದಲ್ಲಿ ಮೂರು ಕೊಳವೆಬಾವಿಗಳನ್ನು ಕೊರೆಸಿತ್ತು. ಆದರೆ, ಒಂದರಲ್ಲಿಯೂ ನೀರು ಸಿಕ್ಕಿರಲಿಲ್ಲ. ವಿಫಲವಾದ ಕೊಳವೆಬಾವಿಗಳನ್ನು ಮುಚ್ಚದೇ ಇದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT