ಕೇರಳದ ಭಾರೀ ಪ್ರವಾಹ, ಭೂಕುಸಿತಕ್ಕೆ ಒಟ್ಟು 373 ಜನರ ಸಾವು

7
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿಕೆ

ಕೇರಳದ ಭಾರೀ ಪ್ರವಾಹ, ಭೂಕುಸಿತಕ್ಕೆ ಒಟ್ಟು 373 ಜನರ ಸಾವು

Published:
Updated:

ನವದೆಹಲಿ : ಭಾರಿ ಮಳೆ, ಪ್ರವಾಹ ಹಾಗೂ ಭೂಕುಸಿತದ ಪರಿಣಾಮ ಕೇರಳದಲ್ಲಿ ಮೇ 30ರಿಂದ ಈ ವರೆಗೆ ಒಟ್ಟು 373 ಜನರು ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ತಿಳಿಸಿದೆ.

ರಾಜ್ಯದ 14 ಜಿಲ್ಲೆಗಳಲ್ಲಿ ಒಟ್ಟು 87 ಜನರು ಗಾಯಗೊಂಡಿದ್ದು, 32 ಜನರು ನಾಪತ್ತೆಯಾಗಿದ್ದಾರೆ ಎಂದು ಎನ್‌ಡಿಎಂಎ ಮಂಗಳವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರಿ ಪ್ರವಾಹದಿಂದಾಗಿ 54.11 ಲಕ್ಷ ಜನರು ತೊಂದರೆಗೀಡಾಗಿದ್ದಾರೆ. ರಾಜ್ಯದಲ್ಲಿ ಸ್ಥಾಪಿಸಲಾಗಿರುವ 5,645 ನಿರಾಶ್ರಿತರ ಶಿಬಿರಗಳಲ್ಲಿ 12.47 ಲಕ್ಷ ಜನರು ಆಶ್ರಯ ಪಡೆದಿದ್ದಾರೆ. ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ಸಂಬಂಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) 59 ತಂಡ ಹಾಗೂ 207 ದೋಣಿಗಳನ್ನು ನಿಯೋಜನೆ ಮಾಡಿದೆ.

ನೌಕಾಪಡೆ ವೈದ್ಯರನ್ನು ಒಳಗೊಂಡ ಒಂದು ತಂಡವನ್ನು ಸಂತ್ರಸ್ತರ ರಕ್ಷಣೆ ಹಾಗೂ ಪರಿಹಾರ ಕಾರ್ಯಕ್ಕಾಗಿ ನಿಯೋಜನೆ ಮಾಡಿದೆ ಎಂದೂ ಎನ್‌ಡಿಎಂಎ ತಿಳಿಸಿದೆ.

ನೀರಿನ ಮಟ್ಟ:  ಕೇರಳದಲ್ಲಿರುವ ವಿವಿಧ ಅಣೆಕಟ್ಟುಗಳಲ್ಲಿನ ನೀರಿನ ಮಟ್ಟ ಹೀಗಿದೆ.

ಮುಲ್ಲ ಪೆರಿಯಾರ್‌– 140 ಅಡಿ
 ಇಡುಕ್ಕಿ– 2402.18 ಅಡಿ,
ಬಾಣಾಸುರ ಸಾಗರ– 775.2 ಮೀ
ಕರಪುಳ– 758.2 ಮೀ
ಥೆನ್ಮಲ– 114.80 ಮೀ
 ಇಡಮಲಯಾರ್‌– 168.86 ಮೀ
 ಪಳಸ್ಸಿ– 16.9 ಮೀ

ರಕ್ಷಣಾ ಕಾರ್ಯಕ್ಕೆ ನಿಯೋಜನೆಗೊಂಡ ತಂಡಗಳು

ಎನ್‌ಡಿಆರ್‌ಎಫ್‌– 59

ನೌಕಾಪಡೆ– 94

ಸೇನೆ– 23

ಕೋಸ್ಟ್‌ಗಾರ್ಡ್‌– 36

ಸಿಆರ್‌ಪಿಎಫ್‌– 10

ಬಿಎಸ್‌ಎಫ್‌– 3 ಕಂಪನಿ (ಒಟ್ಟು 300 ಸಿಬ್ಬಂದಿ)

 ದೋಣಿಗಳು

ಎನ್‌ಡಿಆರ್‌ಎಫ್‌– 207

ಸೇನೆ– 104

ನೌಕಾಪಡೆ– 94

ಕೋಸ್ಟ್‌ಗಾರ್ಡ್‌– 76

ಹೆಲಿಕಾಪ್ಟರ್‌

ನೌಕಾಪಡೆ–9

ವಾಯುಪಡೆ– 22

ಕೋಸ್ಟ್‌ ಗಾರ್ಡ್–2, 23 (ಫಿಕ್ಸ್‌ಡ್‌ ವಿಂಗ್‌)

ಏರ್‌ಕ್ರಾಫ್ಟ್‌

ನೌಕಾಪಡೆ– 2 (ಫಿಕ್ಸ್‌ಡ್‌ ವಿಂಗ್‌)

ಕೋಸ್ಟ್‌ಗಾರ್ಡ್‌– 2

ವಾಯುಪಡೆ– 23 (ಫಿಕ್ಸ್‌ಡ್‌ ವಿಂಗ್‌)

 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !