ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವಚಿತ್ರವುಳ್ಳ ಮತ ಚೀಟಿ ಬೇಡ: ಆಯೋಗ

Last Updated 28 ಫೆಬ್ರುವರಿ 2019, 20:29 IST
ಅಕ್ಷರ ಗಾತ್ರ

ನವದೆಹಲಿ: ಮತಗಟ್ಟೆ ಅಧಿಕಾರಿಗಳು ನೀಡುವ ಭಾವಚಿತ್ರವುಳ್ಳ ಮತ ಚೀಟಿಗಳನ್ನು ಮತದಾರರನ್ನು ಗುರುತಿಸಲು ಸ್ವೀಕರಿಸುವುದಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲೇ ಈ ಪದ್ಧತಿಯನ್ನು ಕೈಬಿಡಲಾಗುವುದು. ಜತೆಗೆ, ಉಪಚುನಾವಣೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲೂ ಈ ಚೀಟಿ ಅನ್ವಯವಾಗುವುದಿಲ್ಲ ಎಂದು ತಿಳಿಸಿದೆ.

ಮತದಾರರ ಪಟ್ಟಿ ಅಂತಿಮಗೊಳಿಸಿದ ನಂತರ ಈ ಚೀಟಿಗಳನ್ನು ಮುದ್ರಿಸಲಾಗುತ್ತಿದೆ ಮತ್ತು ಮತಗಟ್ಟೆ ಬಳಿಯೇ ವಿತರಿಸುತ್ತಿರುವುದರಿಂದ ದುರುಪಯೋಗವಾಗುವ ಸಾಧ್ಯತೆಗಳಿವೆ. ಹೀಗಾಗಿ, ಈ ಕ್ರಮಕೈಗೊಳ್ಳಲಾಗಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಮತ ಚಲಾಯಿಸಲು ಮತಗಟ್ಟೆಯಲ್ಲಿ ಚುನಾವಣಾ ಆಯೋಗ ನೀಡಿರುವ ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ಮತದಾರರು ಹಾಜರುಪಡಿಸಬೇಕು ಎಂದು ಆಯೋಗ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಭಾವಚಿತ್ರವುಳ್ಳ ಮತ ಚೀಟಿಯಲ್ಲಿ ಯಾವುದೇ ರೀತಿ ದೃಢೀಕರಣ ಅಥವಾ ಭದ್ರತಾ ವಿನ್ಯಾಸಗಳಿಲ್ಲ. ಈಗಾಗಲೇ ಶೇಕಡ 99ರಷ್ಟು ಮತದಾರರಿಗೆ ಭಾವಚಿತ್ರವುಳ್ಳ ಗುರುತಿನ ಚೀಟಿ ನೀಡಲಾಗಿದೆ. ಜತೆಗೆ ಆಧಾರ್‌ ಕಾರ್ಡ್‌ಗಳನ್ನು ಸಹ ನಾಗರಿಕರಿಗೆ ವಿತರಿಸಲಾಗಿದೆ. ಹೀಗಾಗಿ, ಭಾವಚಿತ್ರವುಳ್ಳ ಮತ ಚೀಟಿಯ ಅಗತ್ಯವಿಲ್ಲ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT