ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ–ಕಿಡಿ: ಮಹಾಮೈತ್ರಿ ಎಂಬುದು ವಿರೋಧ ಪಕ್ಷಗಳ ಭ್ರಮೆ

Last Updated 18 ಮಾರ್ಚ್ 2019, 18:24 IST
ಅಕ್ಷರ ಗಾತ್ರ

* ಮಹಾಮೈತ್ರಿ ಎಂಬುದು ವಿರೋಧ ಪಕ್ಷಗಳ ಭ್ರಮೆ ಮಾತ್ರ. ದೇಶದಾದ್ಯಂತ ಅದು ಉರುಳಿಹೋಗಲಿದೆ. ನಾವು ಬಿಹಾರದಲ್ಲಿ ಎಷ್ಟೋ ಮೊದಲೇ ಮೈತ್ರಿ ಮಾಡಿಕೊಂಡಿದ್ದೆವು. ಆದರೆ ಚುನಾವಣೆ ಘೋಷಣೆಯಾದ ಬಳಿಕವೂ ವಿರೋಧಪಕ್ಷಗಳ ಸೀಟು ಹೊಂದಾಣಿಕೆ ಅಂತಿಮಗೊಂಡಿಲ್ಲ

–ಚಿರಾಗ್ ಪಾಸ್ವಾನ್, ಎಲ್‌ಜೆಪಿ ನಾಯಕ

* ಸದ್ಯದಲ್ಲೇ ನೇಮಕವಾಗಲಿರುವ ನೂತನ ಲೋಕಪಾಲರಿಗೆ ರಫೇಲ್ ಭ್ರಷ್ಟಾಚಾರ ಹಗರಣದ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಮ್ ಆದ್ಮಿ ಪಕ್ಷ ದೂರು ನೀಡಲಿದೆ. ಲೋಕಪಾಲರನ್ನು ನೇಮಿಸಲು ‘ಚೌಕೀದಾರ’ ಐದು ವರ್ಷ ತೆಗೆದುಕೊಂಡಿದ್ದು ಏಕೆ? ಇದು ನಾಚಿಕೆಗೇಡಿನ ವಿಚಾರ

ಗೋಪಾಲ್ ರಾಯ್‌, ಆಮ್ ಆದ್ಮಿ ಮುಖಂಡ

* ಮೋದಿ ಅವರ ಮೈ ಭಿ ಚೌಕೀದಾರ್ ಘೋಷಣೆ ಬಡವರ ಹೊಟ್ಟೆ ತುಂಬಿಸುವುದಿಲ್ಲ. ಘೋಷಣೆಗಳು ನಮ್ಮ ಯುವಜನರಿಗೆ ಕೆಲಸವನ್ನೂ ನೀಡುವುದಿಲ್ಲ. ‘ಸುಳ್ಳಿನ ಸರ್ಕಾರ’ ಇಷ್ಟು ವರ್ಷಗಳಲ್ಲಿ ಕೊಟ್ಟ ಯಾವುದೇ ಭರವಸೆ ಈಡೇರಿಸಿಲ್ಲ. ಹೀಗಿದ್ದೂ ಮತ ಪಡೆಯುವ ಉದ್ದೇಶದಿಂದ ಮತ್ತೆ ಸುಳ್ಳಿನ ಸರಪಳಿ ಹೆಣೆಯಲಾಗಿದೆ.

-ಕ್ಯಾಪ್ಟನ್ ಅಮರೀಂದರ್ ಸಿಂಗ್, ಪಂಜಾಬ್ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT