ಮಂಗಳವಾರ, ಜನವರಿ 28, 2020
17 °C

ಡೇಟಿಂಗ್‌ ಸೈಟಿನಲ್ಲಿ ₹73.5 ಲಕ್ಷ ಕಳೆದುಕೊಂಡ ಹಿರಿಯ ನಾಗರಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಡೇಟಿಂಗ್ ಸೈಟ್‌ನಲ್ಲಿ ಸದಸ್ಯತ್ವ ಕೊಡಿಸುವುದಾಗಿ ನಂಬಿಸಿ ಹಿರಿಯ ನಾಗರಿಕರೊಬ್ಬರಿಂದ ₹73.5 ಲಕ್ಷ ದೋಚಿದ ಘಟನೆ ಮುಂಬೈನಲ್ಲಿ ನಡೆದಿದೆ. 

ಈ ಪ್ರಕರಣವನ್ನು ಭೇದಿಸಿದ ಖಾರ್‌ಘರ್‌ ಪೊಲೀಸರು ಕೊಲ್ಕತ್ತಾದಲ್ಲಿನ ನಕಲಿ ಕಾಲ್ ಸೆಂಟರ್‌ ಮೇಲೆ ದಾಳಿಮಾಡಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಸೊದ್‌ಪುರ್‌ ನಿವಾಸಿ ಸ್ನೇಹ ಆಲಿಯಾಸ್‌ ಮಹಿ ದಾಸ್‌(25), ಮಂಡಲ್‌ಪುರದ ಪ್ರಭಾರ್‌ ಸಾಹಾ(35), ಮತ್ತು ಹೌರಾದ ಅರುಣ್‌ ರಾಯ್‌ ಎಂದು ಗುರುತಿಸಲಾಗಿದೆ. 

ಸ್ನೇಹಾ ಎಂಬುವರು ಹಿರಿಯ ನಾಗರಿಕನಿಗೆ ಕರೆಮಾಡಿ ಲೊಕಾನ್‌ಟೊ ಡೇಟಿಂಗ್‌ ಆ್ಯಪ್‌ನಲ್ಲಿ ರಿಜಿಸ್ಟರ್ ಮಾಡಿದರೆ ನೀವು ಬಹುಬೇಗ ಹುಡುಗಿಯರೊಂದಿಗೆ ಡೇಟ್ ಮಾಡಬಹುದು, ನೀವು ಕರೆದಲ್ಲಿಗೆ ಹುಡುಗಿಯರನ್ನು ಕಳುಹಿಸಲಾಗುವುದು ಎಂದು ಆಮಿಷ ಒಡ್ಡಿದ್ದರು. ಇದಕ್ಕೆ ನೋಂದಣಿ ಶುಲ್ಕ ಮತ್ತು ಇತರ ಶುಲ್ಕಗಳು ಎಂದು ಹೇಳಿ ಹಣ ಪಡೆಯಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಡೇಟಿಂಗ್ ಸೈಟಿನಲ್ಲಿ ಯಾವುದೇ ಹುಡುಗಿ ಸಿಗದಿದ್ದಾಗ ಸದಸ್ಯತ್ವವನ್ನು ರದ್ದುಗೊಳಿಸಿ ಹಣವನ್ನು ಹಿಂದಿರುಗಿಸುವಂತೆ ಅವರು ಕೇಳಿ ಕೊಂಡಿದ್ದಾರೆ. ಅದಕ್ಕೆ ಹುಡುಗಿಯರ ಬೇಡಿಕೆ ಇಟ್ಟಿದ್ದಾಗಿ ಪೊಲೀಸರಿಗೆ ದೂರು ನೀಡುವುದಾಗಿ ಆರೋಪಿಗಳು ಬೆದರಿಸಿದ್ದರು

ಆರೋಪಿಗಳು ಅವರಿಂದ ಒಟ್ಟಾರೆ ₹73.5 ಲಕ್ಷ ಹಣ ಪಡೆದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು