ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವಿ ಪಡೆದ ವಿಶ್ವದ ಕಿರಿಯ ಎನಿಸಿಕೊಳ್ಳುತ್ತಿದ್ದಾನೆ 9ರ ಪೋರ!

Last Updated 16 ನವೆಂಬರ್ 2019, 12:29 IST
ಅಕ್ಷರ ಗಾತ್ರ

ನವದೆಹಲಿ: ಪದವಿ ಪಡೆದ ಅತ್ಯಂತ ಕಿರಿಯ ಎನ್ನುವ ಖ್ಯಾತಿಗೆ ಪಾತ್ರವಾಗಲು 9 ವರ್ಷದ ಲಾರೆಂಟ್ ಸೈಮನ್ಸ್ ಸಿದ್ಧವಾಗಿದ್ದು, ಈ ಪುಟ್ಟ ಪ್ರತಿಭೆಯು ಐಂಡ್‌ಹೋವನ್ ತಂತ್ರಜ್ಞಾನ ವಿಶ್ವವಿದ್ಯಾಲಯ(TUE)ದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಮುಂದಿನ ಡಿಸೆಂಬರ್‌ನಲ್ಲಿ ಪದವಿ ಪಡೆಯಲಿದ್ದಾನೆ.

ಟೆಲಿಗ್ರಾಫ್ ವರದಿಯ ಪ್ರಕಾರ, ಲಾರೆಂಟ್‌ನ ಐಕ್ಯೂ ಮಟ್ಟ ಕನಿಷ್ಟ 145 ಆಗಿದೆ. ತಾನು 8 ವರ್ಷದವನಿದ್ದಾಗಲೇ ಕೇವಲ 18 ತಿಂಗಳಿನಲ್ಲಿ ಪ್ರೌಢಶಿಕ್ಷಣವನ್ನು ಲಾರೆಂಟ್ ಪೂರ್ಣಗೊಳಿಸಿದ್ದಾನೆ. ಈ ವರ್ಷದ ಆರಂಭದಲ್ಲಿ ಪದವಿ ಕೋರ್ಸ್‌ಗೆ ಸೇರಿದಾಗ ವಿಶ್ವವಿದ್ಯಾಲಯದ ಅತ್ಯಂತ ಕಿರಿಯ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದಾನೆ.

ಸಿಎನ್‌ಎನ್‌ನೊಂದಿಗಿನ ಸಂದರ್ಶನದಲ್ಲಿ ಮಾತನಾಡಿರುವ ಲಾರೆಂಟ್ ತಂದೆ ಅಲೆಕ್ಸಾಂಡರ್ ಸೈಮನ್ಸ್, '9 ವರ್ಷದ ತಮ್ಮ ಪುತ್ರ ಎಲೆಕ್ಟ್ರಿಕ್ ಎಂಜಿನಿಯರಿಂಗ್‌ನಲ್ಲಿ ಪಿಎಚ್.ಡಿ ಮಾಡುವ ಮತ್ತು ಇದರ ಜತೆಯಲ್ಲಿ ಮೆಡಿಸಿನ್‌ನಲ್ಲಿ ಪದವಿ ಪಡೆಯುವ ಯೋಜನೆ ಹೊಂದಿದ್ದಾನೆ' ಎಂದು ತಿಳಿಸಿದ್ದಾರೆ.

'ವಿಶ್ವಾದ್ಯಂತ ಇರುವ ಹಲವು ಪ್ರತಿಷ್ಟಿತ ವಿಶ್ವವಿದ್ಯಾಲಯಗಳು ಲಾರೆಂಟ್‌ನ ನೇಮಕಾತಿಗೆ ಮುಂದೆ ಬಂದಿವೆ. ಲಾರೆಂಟ್ ತುಂಬಾ ಗಂಭೀರವಾಗಿರಲು ನಾವು ಬಯಸುವುದಿಲ್ಲ. ಆತನಿಗೆ ಇಷ್ಟವಾಗಿದ್ದನ್ನು ಅವನು ಮಾಡುತ್ತಾನೆ. ನಾವು ಆತನ ಮತ್ತು ಅವನ ಪ್ರತಿಭೆ ಮಧ್ಯೆ ಸಮತೋಲನವನ್ನು ಸಾಧಿಸಬೇಕಿದೆ' ಎನ್ನುತ್ತಾರೆ ಪಾಲಕರು.

ಟಿಯುಇಯ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನ ನಿರ್ದೇಶಕ ಸ್ಜೋರ್ಡ್ ಹಲ್ಶಾಫ್ ಮಾತನಾಡಿ, 'ಇದುವರೆಗೂ ನಾವು ನೋಡಿರುವ ವಿದ್ಯಾರ್ಥಿಗಳಲ್ಲಿ ಲಾರೆಂಟ್ ಅತ್ಯಂತ ವೇಗವಾಗಿ ಕಲಿಯುವ ವಿದ್ಯಾರ್ಥಿ. ಕೇವಲ ಅಗಾಧ ಬುದ್ಧಿವಂತಿಕೆ ಮಾತ್ರವಲ್ಲ ಅತ್ಯಂತ ಸಹಾನುಭೂತಿಯನ್ನು ಹೊಂದಿದ್ದಾನೆ' ಎನ್ನುತ್ತಾರೆ.

ಲಾರೆಂಟ್ ತಾಯಿ ಲಿದಿಯಾ ಮಾತನಾಡಿ, 'ಲಾರೆಂಟ್ ಅತ್ಯಂತ ವಿಶೇಷ ಎನ್ನುವುದನ್ನು ಮೊದಲಿಗೆ ಆತನ ಅಜ್ಜಿ ತಾತ ಗುರುತಿಸಿದರು' ಎಂದು ಹೇಳಿದ್ದಾರೆ.

ಲಾರೆಂಟ್ ಈ ಸಾಧನೆಯೊಂದಿಗೆ ವಿಶ್ವದ ಅತ್ಯಂತ ಕಿರಿಯ ಪದವಿಧರ ಎನ್ನುವ ಕೀರ್ತಿಗೆ ಪಾತ್ರನಾಗಲಿದ್ದು, ಮೈಕೆಲ್ ಕಾರ್ನೆಯ ದಾಖಲೆಯನ್ನು ಸರಿಗಟ್ಟಲಿದ್ದಾನೆ. ಮೈಕೆಲ್ ಕಾರ್ನೆಯು ಅಲಬಾನಾ ವಿಶ್ವವಿದ್ಯಾಲಯದಿಂದ ತನ್ನ 10ನೇ ವಯಸ್ಸಿಗೆ ಪದವಿ ಪಡೆದಿದ್ದನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT