ಶುಕ್ರವಾರ, ಜನವರಿ 17, 2020
22 °C

ಸಿಆರ್‌ಪಿಎಫ್‌ ಡಿಜಿಯಾಗಿ ಮಾಹೇಶ್ವರಿ ನೇಮಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಮಹಾನಿರ್ದೇಶಕರನ್ನಾಗಿ (ಡಿಜಿ) ಹಿರಿಯ ಐಪಿಎಸ್‌ ಅಧಿಕಾರಿ ಎ.ಪಿ.ಮಾಹೇಶ್ವರಿ ಅವರನ್ನು ನೇಮಕ ಮಾಡಿ ಸಿಬ್ಬಂದಿ ಸಚಿವಾಲಯ ಸೋಮವಾರ ಆದೇಶ ಹೊರಡಿಸಿದೆ. 

ಉತ್ತರ ಪ್ರದೇಶ ಕೇಡರ್‌ನ, 1984ರ ತಂಡ ಐಪಿಎಸ್‌ ಅಧಿಕಾರಿಯಾಗಿರುವ ಮಾಹೇಶ್ವರಿ ಅವರು ಸದ್ಯ ಗೃಹ ಸಚಿವಾಲಯದ (ಆಂತರಿಕ ಭದ್ರತೆ) ವಿಶೇಷ ಕಾರ್ಯದರ್ಶಿಯಾಗಿದ್ದಾರೆ. ಅವರ ಡಿಜಿ ಅಧಿಕಾರದ ಅವಧಿಯು 2021ರ ಫೆಬ್ರುವರಿ 28ರ ವರೆಗೆ ಇರಲಿದೆ. ಆರ್‌.ಆರ್‌.ಭಟ್ನಾಗರ್‌ ಅವರು ನಿವೃತ್ತರಾಗಿದ್ದರಿಂದ ಕಳೆದ 31 ರಿಂದ ಈ ಹುದ್ದೆ ಖಾಲಿ ಇತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು