ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಲ್ವಾಮಾ ಎಫೆಕ್ಟ್‌: ಯೋಧರ ಕಾನ್‌ವಾಯ್‌ಗಳಿಗೆ ಕಡಿವಾಣ, ಏರ್‌ಲಿಫ್ಟ್‌ಗೆ ಮೊರೆ

Last Updated 14 ಫೆಬ್ರುವರಿ 2020, 5:03 IST
ಅಕ್ಷರ ಗಾತ್ರ

ಪುಲ್ವಾಮಾ ಬಾಂಬ್ ದಾಳಿಗೆಇಂದು (ಫೆ.14) ಒಂದು ವರ್ಷ.ಕೇಂದ್ರೀಯ ಮೀಸಲು ಭದ್ರತಾ ಪೊಲೀಸ್ (ಸಿಆರ್‌ಪಿಎಫ್) ಯೋಧರನ್ನು ಕರೆದೊಯ್ಯುತ್ತಿದ್ದ ಕಾನ್‌ವಾಯ್‌ನಲ್ಲಿದ್ದ (ವಾಹನಸಾಲು) ಬಸ್‌ ಒಂದಕ್ಕೆ ಉಗ್ರರುಸ್ಫೋಟಕ ತುಂಬಿದ್ದ ಕಾರ್‌ ಡಿಕ್ಕಿ ಹೊಡೆಸಿ ಅಂದು ಸ್ಫೋಟಿಸಿದ್ದರು. ಅಂದಿನ ದುರಂತವನ್ನು, ಹುತಾತ್ಮ ಯೋಧರನ್ನು ಇಂದುದೇಶನೆನಪಿಸಿಕೊಳ್ಳುತ್ತಿದೆ.

ಪುಲ್ವಾಮಾ ದಾಳಿಯಿಂದ ಪಾಠ ಕಲಿತಿರುವ ಭದ್ರತಾ ಪಡೆಗಳು ಇದೀಗ ಕಾನ್‌ವಾಯ್ ಚಲನೆ ವೇಳೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸುತ್ತಿವೆ. ಭದ್ರತಾ ಸಿಬ್ಬಂದಿ ಸ್ಥಳಾಂತರಕ್ಕೆ ವಾಯುಮಾರ್ಗದ ಅವಲಂಬನೆ ಹೆಚ್ಚಾಗಿದೆ. ಸೇನೆ ಮತ್ತು ಇತರ ಭದ್ರತಾ ಪಡೆಗಳ ಶಿಬಿರಗಳಿಗೆ ಅಗತ್ಯವಿರುವ ಆಹಾರ ಸಾಮಗ್ರಿ, ಯುದ್ಧೋಪಕರಣಗಳು ಮತ್ತು ಇತರ ಸಾಮಗ್ರಿಗಳ ಸಂಚಾರಕ್ಕಾಗಿ ಮಾತ್ರ ಭೂಮಾರ್ಗವನ್ನು ಬಳಸುತ್ತಿವೆ.

ಪುಲ್ವಾಮಾ ದಾಳಿಗೆ ಮೊದಲು ಜಮ್ಮು ಮತ್ತು ಶ್ರೀನಗರಹೆದ್ದಾರಿಯಲ್ಲಿ10ರಿಂದ 70 ವಾಹನಗಳಿದ್ದ ಕಾನ್‌ವಾಯ್‌ಗಳು ಪ್ರತಿದಿನ ಎಂಬಂತೆ ಸಂಚರಿಸುತ್ತಿದ್ದವು. ಆದರೆ ಈ ಪ್ರಮಾಣವು ಈಗ ತಿಂಗಳಿಗೆ 7ರಿಂದ 8ಕಾನ್‌ವಾಯ್‌ಗಳಿಗೆ ಇಳಿದಿದೆ. ಈ ಕಾನ್‌ವಾಯ್‌ಗಳ ಬೆಂಗಾವಲಿಗೆ ಯೋಧರಿರುವವಾಹನಗಳು ಹೋಗುತ್ತವೆಯಾದರೂ, ಸೇನಾ ಸಿಬ್ಬಂದಿಯ ಸಂಚಾರದ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.

ಕಾನ್‌ವಾಯ್‌ಗಳು ಸಂಚರಿಸುವಾಗ ಅನುಸರಿಸುತ್ತಿದ್ದ ಭದ್ರತಾ ಶಿಷ್ಟಾಚಾರವನ್ನೂ ಪರಿಷ್ಕರಿಸಲಾಗಿದೆ.ಕಾನ್‌ವಾಯ್‌ಗಳು ಸಂಚರಿಸುವ ಸಂದರ್ಭಹೆದ್ದಾರಿಯ ಎಲ್ಲಸಂಪರ್ಕ ರಸ್ತೆಗಳನ್ನು ಬಂದ್ ಮಾಡಲಾಗುತ್ತದೆ. ಜವಾಹರ್ ಸುರಂಗದಿಂದ ಶ್ರೀನಗರದವರೆಗಿನ ರಸ್ತೆಯಲ್ಲಿ ಸಿಸಿಟಿವಿ ನಿಗಾಕ್ಕೆ ವ್ಯವಸ್ಥೆ ಮಾಡಲಾಗಿದೆ.

ಕಾನ್‌ವಾಯ್‌ಗಳ ಸಂಚಾರಕ್ಕೆ ಮೊದಲುವಿಶೇಷ ತಂಡಗಳು ರಸ್ತೆಯಲ್ಲಿ ಸ್ಫೋಟಕಗಳಿಗಾಗಿತಪಾಸಣೆ ನಡೆಸುತ್ತವೆ. ಸೂರ್ಯಾಸ್ತಕ್ಕೆ ಮೊದಲು ಉದ್ದೇಶಿತ ಸ್ಥಳ ಸೇರಲು ಸಾಧ್ಯವಿಲ್ಲ ಎಂದಾದರೆ ಕಾನ್‌ವಾಯ್ ಸಂಚಾರಕ್ಕೆ ಅಧಿಕಾರಿಗಳುಅನುಮತಿಯನ್ನೇ ಕೊಡುವುದಿಲ್ಲ.

ಭದ್ರತಾ ಸಿಬ್ಬಂದಿಯ ಸ್ಥಳಾಂತರಕ್ಕೆ ವಾಯುಮಾರ್ಗವನ್ನು ಹೆಚ್ಚಾಗಿ ಅವಲಂಬಿಸಲಾಗುತ್ತಿದೆ.ಜಮ್ಮು ಮತ್ತು ಶ್ರೀನಗರ ನಡುವೆ ವಾರಕ್ಕೆ ಮೂರು ದಿನಏರ್‌ ಇಂಡಿಯಾ ವಿಮಾನಗಳ ಮೂಲಕ ಭದ್ರತಾ ಸಿಬ್ಬಂದಿಯನ್ನುಸ್ಥಳಾಂತರಿಸಲಾಗುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಹಿಂದುಸ್ತಾನ್ ಟೈಮ್ಸ್‌’ ವರದಿ ಮಾಡಿದೆ.

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಎಲ್ಲ 40 ಯೋಧರಿಗೆ ಪರಿಹಾರ ದೊರೆಕಿಸಲು ಸಿಆರ್‌ಪಿಎಫ್ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಹುತಾತ್ಮ ಯೋಧರ ಪೈಕಿ 39 ಮಂದಿಗೆ ತಲಾ ₹ 1.3 ಕೋಟಿ ಪರಿಹಾರ ದೊರೆತಿದೆ. ಓರ್ವ ಯೋಧರ ವಿಚಾರದಲ್ಲಿ ವಾರಸುದಾರರು ಯಾರು ಎಂಬ ಪ್ರಶ್ನೆ ಬಗೆಹರಿಯದ ಕಾರಣ ಈವರೆಗೆ ಪರಿಹಾರ ಸಿಕ್ಕಿಲ್ಲ.

ದೇಶದ ವಿವಿಧೆಡೆ ನಡೆದ ಕಾರ್ಯಾಚರಣೆಗಳಲ್ಲಿಹುತಾತ್ಮರಾದ 2,199 ಯೋಧರ ಕುಟುಂಬಗಳ ಜೊತೆಗೆ ಸಂಪರ್ಕ ಸಾಧಿಸಲು ಸಿಆರ್‌ಪಿಎಫ್ ಈಚೆಗಷ್ಟೇ ಮೊಬೈಲ್ ಆ್ಯಪ್‌ ಒಂದನ್ನು ಬಿಡುಗಡೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT