ಶನಿವಾರ, ಏಪ್ರಿಲ್ 4, 2020
19 °C

ಪಾಕ್‌ಗೆ ಮಾಹಿತಿ ರವಾನೆ ಶಂಕೆ: ಯುವಕರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್‌: ಪಾಕಿಸ್ತಾನದ ಗೂಢಚಾರ ಸಂಸ್ಥೆಯ ಪರವಾಗಿ ಇಲ್ಲಿನ ದೇಶದ ರಕ್ಷಣಾ ವ್ಯವಸ್ಥೆಯನ್ನು ವಿಶೇಷವಾಗಿ ಗಮನಿಸುತ್ತಿದ್ದ ಆರೋಪದ ಮೇಲೆ ಬಾಲಕ ಸೇರಿದಂತೆ ನಾಲ್ವರನ್ನು ಕಛ್‌ ಪೊಲೀಸರು ಬಂಧಿಸಿದ್ದಾರೆ.

ಕಚ್ (ಪಶ್ಚಿಮ) ವಿಭಾಗದ ಪೊಲೀಸ್‌ ವರಿಷ್ಠಾಧಿಕಾರಿ ಸೌರಭ್‌ ತೊಲಂಬಿಯ ಅವರು ಇದನ್ನು ದೃಢಪಡಿಸಿದ್ದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಗೌಪ್ಯಮಾಹಿತಿಯನ್ನು ಕಳುಹಿಸಿಸುತ್ತಿದ್ದ ಶಂಕೆಯ ಮೇಲೆ ಬಂಧಿಸಲಾಗಿದೆ ಎಂದರು.

‘ಅವರ ಫೋನ್‌ಗಳಲ್ಲಿ ಕೆಲವೊಂದು ಮಾಹಿತಿ ಗುರುತಿಸಿದ್ದು, ಅದಕ್ಕೆ ಅವರು ಸಕಾರಣ ನೀಡಿಲ್ಲ. ಈ ಎಲ್ಲರ ವಿರುದ್ಧ ಅಧಿಕೃತ ಗೋಪ್ಯತಾ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗಿದೆ’ ಎಂದು ತಿಳಿಸಿದರು.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು