ಶುಕ್ರವಾರ, ಏಪ್ರಿಲ್ 23, 2021
27 °C

ಬೋರ್ಡಿಂಗ್ ಪಾಸ್‍ನಲ್ಲಿ ಮೋದಿ ಜಾಹೀರಾತು ತೆಗೆದು ಹಾಕಿದ ಏರ್ ಇಂಡಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬೋರ್ಡಿಂಗ್ ಪಾಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿಯವರ ಫೋಟೊ ಇರುವ ಜಾಹೀರಾತು ತೆಗೆದು ಹಾಕಲು ಏರ್ ಇಂಡಿಯಾ ನಿರ್ಧರಿಸಿದೆ.

ಈ ರೀತಿ ಬೋರ್ಡಿಂಗ್ ಪಾಸ್‍ನಲ್ಲಿ ನಾಯಕರ ಫೋಟೊ ಮುದ್ರಿಸಿರುವುದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಪ್ರಯಾಣಿಕರೊಬ್ಬರು ಸೋಮವಾರ ದೂರಿದ್ದರಿಂದ ವಿಮಾನ ಸಂಸ್ಥೆ ಈ ನಿರ್ಧಾರ ತೆಗೆದುಕೊಂಡಿದೆ.

ಪಂಜಾಬ್‍ನ ಮಾಜಿ ಡಿಜಿಪಿ ಶಶಿಕಾಂತ್ ಅವರು ದೆಹಲಿಯಿಂದ ಚಂಡೀಗಢಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ನವದೆಹಲಿ ವಿಮಾನ ನಿಲ್ದಾಣದಿಂದ ನೀಡಿದ ಬೋರ್ಡಿಂಗ್ ಪಾಸ್‍ನ್ನು ಟ್ವೀಟ್ ಮಾಜಿದ ಶಶಿಕಾಂತ್, ಇದರಲ್ಲಿ ಬಿಜೆಪಿ ನಾಯಕರ ಫೋಟೊ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಮಾರ್ಚ್ 25, 2019, ನವದೆಹಲಿ ವಿಮಾನ ನಿಲ್ದಾಣದಲ್ಲಿ ಸಿಕ್ಕಿದ ಬೋರ್ಡಿಂಗ್ ಪಾಸ್. ಇದರಲ್ಲಿ  ನರೇಂದ್ರ ಮೋದಿ, 'ವೈಬ್ರೆಂಟ್ ಗುಜರಾತ್'  ಮತ್ತು ವಿಜಯ್ ರುಪಾನಿಯ ಚಿತ್ರವಿದೆ. ಇದಕ್ಕೆಲ್ಲಾ ಸಾರ್ವಜನಿಕರ ದುಡ್ಡು ವ್ಯಯಿಸುವುದು ಯಾಕೆ? ಚುನಾವಣಾ ಆಯೋಗ ಇತ್ತ ಗಮನಿಸಲಿ ಎಂದು ಶಶಿಕಾಂತ್ ಟ್ವೀಟಿಸಿದ್ದಾರೆ.

ಏರ್ ಇಂಡಿಯಾ ಅಧಿಕಾರಿಗಳ ಪ್ರಕಾರ, ಬೋರ್ಡಿಂಗ್ ಪಾಸ್ ಪ್ರಿಂಟ್ ಮಾಡುವ ಕೆಲಸ ಬೇರೆ ಕಂಪನಿಗೆ ವಹಿಸಿಕೊಡಲಾಗಿತ್ತು. ಇದೀಗ  ಬೋರ್ಡಿಂಗ್ ಪಾಸ್‍ನಲ್ಲಿರುವ ವೈಬ್ರೆಂಟ್ ಗುಜರಾತಿನ ಜಾಹೀರಾತನ್ನು ತೆಗೆದು ಹಾಕಲು ನಾವು ನಿರ್ಧರಿಸಿದ್ದೇವೆ ಎಂದು ಏರ್ ಇಂಡಿಯಾ ವಕ್ತಾರ ಹೇಳಿದ್ದಾರೆ.  ಈ ವಿಷಯವನ್ನು ಚುನಾವಣಾ ಆಯೋಗದ ಗಮನಕ್ಕೂ ತರಲಾಗಿದೆ.

ಈ ರೀತಿ ಆಗಬಾರದಿತ್ತು. ಇದು ನೀತಿ ಸಂಹಿತೆಯ ಉಲ್ಲಂಘನೆ. ಅದು ಯಾವ ಪಕ್ಷವೇ ಆಗಿರಲಿ, ನೀತಿ ಸಂಹಿತೆ ಉಲ್ಲಂಘನೆ ಮಾಡಬಾರದು ಎಂದು ಶಶಿಕಾಂತ್ ಹೇಳಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು