ಮಂಗಳವಾರ, ಜನವರಿ 21, 2020
27 °C

ಮಹಿಳೆಯಿಂದ ಬಾಂಬ್‌ ಸ್ಫೋಟಿಸುವ ಬೆದರಿಕೆ: ನಿಲ್ದಾಣಕ್ಕೆ ಮರಳಿದ ವಿಮಾನ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಮಹಿಳಾ ಪ್ರಯಾಣಿಕರೊಬ್ಬರು ಬಾಂಬ್‌ ಮೂಲಕ ವಿಮಾನವನ್ನು ಮಾರ್ಗಮಧ್ಯೆದಲ್ಲೇ ಸ್ಪೋಟಿಸುವುದಾಗಿ ಬೆದರಿಕೆಯೊಡ್ಡಿದ ಕಾರಣ ಮುಂಬೈಗೆ ಹೊರಟಿದ್ದ ಏರ್‌ಏಷ್ಯಾ ವಿಮಾನ ಕೋಲ್ಕತ್ತ ವಿಮಾನ ನಿಲ್ದಾಣಕ್ಕೆ ಮರಳಿದ ಘಟನೆ ನಡೆದಿದೆ.

ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, 144 ಪ್ರಯಾಣಿಕರಿದ್ದ ಏರ್‌ಏಷ್ಯಾ ವಿಮಾನ ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ಮೋಹಿನಿ ಮಂಡಲ್ ಎಂಬ ಮಹಿಳಾ ಪ್ರಯಾಣಿಕರೊಬ್ಬರು, ತನ್ನ ಸೊಂಟದಲ್ಲಿ ಬಾಂಬ್ ಪಟ್ಟಿ ಕಟ್ಟಿದ್ದು, ಯಾವುದೇ ಕ್ಷಣದಲ್ಲಿ ವಿಮಾನವನ್ನು ಸ್ಫೋಟಿಸಬಹುದು ಎಂದು ಪೈಲೆಟ್‌ಗೆ ಚೀಟಿಯೊಂದನ್ನು ಬರೆದುಕಳಿಸಿದ್ದರು. ಇದರಿಂದ ಭೀತಿಗೀಡಾದ ಪೈಲಟ್ ವಿಮಾನವನ್ನು ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ವಾಪಸ್ ಇಳಿಸಿದ.

ನಂತರ ಮಹಿಳೆಯನ್ನು ತಪಾಸಣೆ ನಡೆಸಿದಾಗ ಆಕೆಯ ದೇಹದಲ್ಲಿ ಯಾವುದೇ ಸ್ಫೋಟಕ ಪತ್ತೆಯಾಗಲಿಲ್ಲ. ಮಹಿಳೆ ಕೋಲ್ಕತ್ತಕ್ಕೆ ವಾಪಸ್ ಮರಳು ಉದ್ದೇಶದಿಂದ ಈ ರೀತಿ ಬೆದರಿಕೆಯೊಡ್ಡಿದ್ದರು ಎಂದು ತಿಳಿದು ಬಂದಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು