ಗುರುವಾರ , ಏಪ್ರಿಲ್ 2, 2020
19 °C

ಬುಧವಾರದಿಂದ ದೇಶಿ ವಿಮಾನಗಳ ಹಾರಾಟ ಸ್ಥಗಿತ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊರೊನಾ ವೈರಸ್‌ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಎಲ್ಲ ಅಂತರ್ದೇಶೀಯ ಪ್ರಯಾಣಿಕ ವಿಮಾನಗಳ ಹಾರಾಟಕ್ಕೆ ಬುಧವಾರದಿಂದ ನಿರ್ಬಂಧ ವಿಧಿಸಿದೆ. ಸರಕು ಸಾಗಣೆ ವಿಮಾನಗಳ ಹಾರಾಟ ಎಂದಿನಂತೆ ಇರಲಿದೆ.

'ಮಾರ್ಚ್‌ 24ರ ಮಧ್ಯರಾತ್ರಿಯಿಂದ ಎಲ್ಲ ಅಂತರ್ದೇಶೀಯ ವಿಮಾನಗಳ ಹಾರಾಟ ನಿಲ್ಲಲಿದೆ. ಆದರೆ ಸರಕು ಸಾಗಣೆ ವಿಮಾನಗಳಿಗೆ ಈ ನಿರ್ಬಂಧ ಇರುವುದಿಲ್ಲ' ಎಂದು ಎಎನ್‌ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.

ದೇಶದಲ್ಲಿ ಕೊರೊನಾವೈರಸ್ ಸೋಂಕಿತರ ಪ್ರಕರಣಗಳು ಸೋಮವಾರ 415ಕ್ಕೆ ಮುಟ್ಟಿದೆ. ಈವರೆಗೆ ಎಂಟು ಮಂದಿ ಮೃತಪಟ್ಟಿದ್ದಾರೆ.

ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾರ್ಚ್ 29ರವರೆಗೆ ವಿದೇಶಗಳಿಗೆ ವೈಮಾನಿಕ ಸೇವೆಗಳನ್ನು ನಿರ್ಬಂಧಿಸಲಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು