ಸಂತಾಪ ಪಟ್ಟಿಯಲ್ಲಿ ಇಲ್ಲದ ಅಂಬರೀಷ್‌ ಹೆಸರು!

7

ಸಂತಾಪ ಪಟ್ಟಿಯಲ್ಲಿ ಇಲ್ಲದ ಅಂಬರೀಷ್‌ ಹೆಸರು!

Published:
Updated:

ನವದೆಹಲಿ: ಲೋಕಸಭೆ ಸದಸ್ಯರು ಬುಧವಾರ ಸ್ಮರಿಸಿ ಸಂತಾಪ ಸೂಚಿಸಿದ ಅಗಲಿದ ಮಾಜಿ ಸದಸ್ಯರ ಪಟ್ಟಿಯಲ್ಲಿ ಇತ್ತೀಚೆಗೆ ನಿಧನರಾದ ಚಿತ್ರ ನಟ, ಮಾಜಿ ಸದಸ್ಯ ಅಂಬರೀಷ್‌ ಅವರ ಹೆಸರು ಕಂಡುಬರಲಿಲ್ಲ.

ಮಾಜಿ ಸದಸ್ಯರಾದ ಮನ್ಸೂರ್‌ ಅಲಿಖಾನ್‌, ಗುರುದಾಸ್‌ ಕಾಮತ್‌, ಮೋಹನ್‌ ಜೈನ್‌, ಕಮಲಾ ಕುಮಾರಿ, ಪೂರಣ್‌ ಚಂದ್ರ, ಪಿ.ಮಾಣಿಕ್‌ ರೆಡ್ಡಿ, ಶಾಂತಾರಾಂ ಪೂಟ್‌ದುಖೆ, ನಾರಾಯಣದತ್ತ ತಿವಾರಿ, ಮದನ್‌ಲಾಲ್‌ ಖುರಾನಾ, ನಾರಾಯಣ ಸ್ವರೂಪ ಶರ್ಮಾ ಹಾಗೂ ಕನ್ನಡಿಗ ಸಿ.ಕೆ. ಜಾಫರ್‌ ಷರೀಫ್‌ ಅವರನ್ನು ಬುಧವಾರದ ಕಲಾಪದ ಆರಂಭಕ್ಕೆ ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಅಗಲಿದ ಆತ್ಮಗಳಿಗೆ ಶಾಂತಿ ಕೋರಿ ಮೌನ ಆಚರಿಸಲು ಸದಸ್ಯರೆಲ್ಲ ಎದ್ದು ನಿಲ್ಲುತ್ತಿದ್ದಂತೆಯೇ, ಲೋಕಸಭೆಯ ಕಾಂಗ್ರೆಸ್‌ ಗುಂಪಿನ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ‘ಮೇಡಂ, ಅಂಬರೀಷ್‌ ಕೂಡ ನಮ್ಮನ್ನು ಅಗಲಿದ್ದಾರೆ’ ಎಂದು ನೆನಪಿಸಿದರು.

‘ಅಗಲಿರುವ ಅನೇಕ ಮಹನಿಯರನ್ನು ಸ್ಮರಿಸುವುದಿದೆ, ಅವರಿಗೆ ಗುರುವಾರ ಶ್ರದ್ಧಾಂಜಲಿ ಸಲ್ಲಿಸೋಣ’ ಎಂದು ಸ್ಪೀಕರ್‌ ಹೇಳಿದರು.

.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !