ಸೋಮವಾರ, ಜನವರಿ 27, 2020
17 °C

ದಿಶಾ ಮಸೂದೆಗೆ ಆಂಧ್ರ ವಿಧಾನಸಭೆ ಒಪ್ಪಿಗೆ

ಪಿಟಿಐ Updated:

ಅಕ್ಷರ ಗಾತ್ರ : | |

ಅಮರಾವತಿ: ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ವಿಚಾರಣೆ ನಡೆಸಿ ತೀರ್ಪು ನೀಡಲು 21 ದಿನಗಳ ಗಡುವು ವಿಧಿಸುವ ಮಸೂದೆಗೆ ಆಂಧ್ರ ‍ಪ್ರದೇಶ ವಿಧಾನಸಭೆ ಶುಕ್ರವಾರ ಒಪ್ಪಿಗೆ ನೀಡಿದೆ. ಅತ್ಯಾಚಾರಕ್ಕೆ ಗಲ್ಲುಶಿಕ್ಷೆ ವಿಧಿಸುವ ಪ್ರಸ್ತಾವವು ಈ ಮಸೂದೆಯ ಕರಡಿನಲ್ಲಿದೆ.

ಪ್ರಸ್ತಾವಿತ ಹೊಸ ಕಾನೂನಿಗೆ ‘ಆಂಧ್ರಪ್ರದೇಶ ದಿಶಾ ಕಾಯಿದೆ ಕ್ರಿಮಿನಲ್‌ ಕಾನೂನು (ಎಪಿ ತಿದ್ದುಪಡಿ) 2019' ಎಂದು ಹೆಸರಿ
ಸಲಾಗಿದೆ. ತೆಲಂಗಾಣದ ಪಶುವೈದ್ಯೆ ಮೇಲೆ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಈ ಹೆಸರಿಡಲಾಗಿದೆ. ವಿಧಾನಸಭೆಯಲ್ಲಿ ಗೃಹಸಚಿವೆ ಎಂ.ಸುಚರಿತಾ ಅವರು ಮಸೂದೆಯನ್ನು ಮಂಡಿಸಿದ್ದರು.

‘ಇದೊಂದು ಕ್ರಾಂತಿಕಾರಿ ಕ್ರಮ’ ಎಂದು ವೈಎಸ್‌ಆರ್‌ ಕಾಂಗ್ರೆಸ್‌ ಹೇಳಿಕೊಂಡಿದೆ.

ಈ ಕಾಯ್ದೆ ಪ್ರಕಾರ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ದೂರು ದಾಖಲಾದ ಏಳು ದಿನಗಳಲ್ಲಿ ಪೊಲೀಸರು ತನಿಖೆ ಪೂರ್ಣಗೊಳಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಬಳಿಕ ನ್ಯಾಯಾಲಯ 14 ದಿನಗಳೊಳಗೆ ವಿಚಾರಣೆ ಪೂರ್ಣಗೊಳಿಸಿ ಆರೋಪಿಗೆ ಶಿಕ್ಷೆ ವಿಧಿಸಬೇಕು. ಒಟ್ಟು 21 ದಿನಗಳ ಒಳಗೆ ಪ್ರಕರಣ ಇತ್ಯರ್ಥವಾಗಬೇಕು.

ದೌರ್ಜನ್ಯ ಪ್ರಕರಣಗಳ ತ್ವರಿತ ಇತ್ಯರ್ಥಕ್ಕಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ‘ಆಂಧ್ರ ಪ್ರದೇಶ ವಿಶೇಷ ನ್ಯಾಯಾಲಯ 2019’ ಎಂಬ ಕಾಯ್ದೆಗೂ ಸದನದ ಅಂಗೀಕಾರ ದೊರೆತಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು