ಶುಕ್ರವಾರ, ಜೂನ್ 25, 2021
22 °C
ತಬ್ಲೀಗ್‌ ಸಮಾವೇಶಕ್ಕೆ ಅನುಮತಿ ನೀಡಿದ್ದೇಕೆ– ಮಹಾರಾಷ್ಟ್ರ ಸಚಿವ ದೇಶ್‌ಮುಖ್ ಪ್ರಶ್ನೆ

ಡೊಭಾಲ್–ಸಾದ್ ಸಭೆಯ ಔಚಿತ್ಯವೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಮುಂಬೈ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಹಾಗೂ ತಬ್ಲೀಗ್‌ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ಮಧ್ಯೆ ನಡೆದ ಮಧ್ಯರಾತ್ರಿ ಸಭೆಯ ಔಚಿತ್ಯವೇನು ಎಂದು ಮಹಾರಾಷ್ಟ್ರ ಸರ್ಕಾರ ಪ್ರಶ್ನಿಸಿದೆ. 

‘ನಿಜಾಮುದ್ದೀನ್ ಪೊಲೀಸ್ ಠಾಣೆಗೆ ಕಣ್ಣಳತೆ ದೂರದಲ್ಲಿರುವ ಮರ್ಕಜ್‌ನಲ್ಲಿ ಸಮಾವೇಶ ನಡೆಸಲು ಅನುಮತಿ ನೀಡಿದ್ದಾದರೂ ಹೇಗೆ’ ಎಂದು ಮಹಾರಾಷ್ಟ್ರದ ಗೃಹಸಚಿವ, ಎನ್‌ಸಿಪಿಯ ಅನಿಲ್ ದೇಶ್‌ಮುಖ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. 

ಡೊಭಾಲ್ ಹಾಗೂ ಸಾದ್ ನಡುವಿನ ಮಾತುಕತೆಯ ವಿಷಯ ಏನು ಎಂದು ದೇಶ್‌ಮುಖ್ ತಿಳಿಯ ಬಯಸಿದ್ದಾರೆ.

ಸಾದ್‌ ಪತ್ತೆ: ಈ ಮಧ್ಯೆ ದೆಹಲಿ ಪೊಲೀಸರು ಮೌಲಾನಾ ಸಾದ್ ಇರುವ ಸ್ಥಳವನ್ನು ಪತ್ತೆ ಹಚ್ಚಿದ್ದಾರೆ. ಅವರು ದೆಹಲಿಯ ಆಗ್ನೇಯ ಭಾಗದ ಜಾಕೀರ್‌ನಗರದಲ್ಲಿದ್ದಾರೆ. ಪ್ರತ್ಯೇಕ ವಾಸದ ಅವಧಿ ಮುಗಿದ ಬಳಿಕ ತನಿಖೆಗೆ ಸಹಕರಿಸಲಿದ್ದಾರೆ ಎಂದು ಸಾದ್‌ ಅವರ ಪರ ವಕೀಲರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು