ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯ ಜಾಮಿಯಾ ವಿಶ್ವವಿದ್ಯಾಲಯದ ಬಳಿ ಮತ್ತೆ ಗುಂಡಿನ ದಾಳಿ

Last Updated 3 ಫೆಬ್ರುವರಿ 2020, 17:42 IST
ಅಕ್ಷರ ಗಾತ್ರ

ನವದೆಹಲಿ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಸಮೀಪ ಭಾನುವಾರ ರಾತ್ರಿ ಮತ್ತೊಮ್ಮೆ ಗುಂಡಿನ ದಾಳಿ ನಡೆದಿದ್ದು, ಯಾವುದೇ ಸಾವು–ನೋವು ಸಂಭವಿಸಿಲ್ಲ.

‘ವಿಶ್ವವಿದ್ಯಾಲಯದ ಗೇಟ್ ನಂ. 5ರ ಬಳಿ ಭಾನುವಾರ ರಾತ್ರಿ 11.30ರ ಸುಮಾರಿಗೆ ಇಬ್ಬರು ಅಪರಿಚಿತರು ಕೆಂಪು ಸ್ಕೂಟಿಯಲ್ಲಿ ಬಂದು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಅವರು ಬಂದಿದ್ದ ವಾಹನ ಸಂಖ್ಯೆಯನ್ನು ಬರೆದಿಟ್ಟುಕೊಂಡಿದ್ದೇವೆ’ ಎಂದು ಜಾಮಿಯಾ ಸಮನ್ವಯ ಸಮಿತಿ (ಜೆಸಿಸಿ) ತಿಳಿಸಿದೆ.

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ದೆಹಲಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಂಧನಕ್ಕೆ ವಿದ್ಯಾರ್ಥಿಗಳ ಆಗ್ರಹ: ಭಾನುವಾರ ರಾತ್ರಿ ನಡೆದ ಗುಂಡಿನ ದಾಳಿ ಘಟನೆಯನ್ನು ಖಂಡಿಸಿರುವ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳನ್ನೊಳಗೊಂಡ ಜಾಮಿಯಾ ಸಮನ್ವಯ ಸಮಿತಿ (ಜೆಸಿಸಿ), ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದೆ. ವಿಶ್ವವಿದ್ಯಾಲಯದ ಬಳಿ ನಡೆದ ಮೂರನೇ ಗುಂಡಿನ ದಾಳಿ ಇದಾ
ಗಿದೆ. ಶಾಹೀನ್‌ಬಾಗ್‌ನಲ್ಲೂ25 ವರ್ಷದ ಯುವಕ ಗುಂಡು ಹಾರಿಸಿದ್ದ.

ಕುಸ್ತಿಪಟು ಬಂಧನ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಹೊರಗೆ ಜ.30ರಂದು ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಿದ ವ್ಯಕ್ತಿಗೆ ದೇಸಿ ನಿರ್ಮಿತ ಪಿಸ್ತೂಲು ಮಾರಾಟ ಮಾಡಿದ ಆರೋಪದ ಮೇರೆಗೆ ಉತ್ತರ ಪ್ರದೇಶದ ಕುಸ್ತಿಪಟುವನ್ನು ದೆಹಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಬಂಧಿತನನ್ನು ಉತ್ತರ ಪ್ರದೇಶದ ಅಲೀಗಡ ಜಿಲ್ಲೆಯ ಸಹಜಿಪುರ ಗ್ರಾಮದ ಅಜಿತ್ ಎಂದು ಗುರುತಿಸಲಾಗಿದೆ.

ಪಿಸ್ತೂಲು ಮಾರಾಟ ಮಾಡಿದ್ದ ಕುಸ್ತಿಪಟು ಬಂಧನ

ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಹೊರಗೆ ಜ.30ರಂದು ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಿದ ವ್ಯಕ್ತಿಗೆ ದೇಸಿ ನಿರ್ಮಿತ ಪಿಸ್ತೂಲು ಮಾರಾಟ ಮಾಡಿದ ಆರೋಪದ ಮೇರೆಗೆ ಉತ್ತರ ಪ್ರದೇಶದ ಕುಸ್ತಿಪಟುವನ್ನು ದೆಹಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಬಂಧಿತನನ್ನು ಉತ್ತರ ಪ್ರದೇಶದ ಅಲೀಗಡ ಜಿಲ್ಲೆಯ ಸಹಜಿಪುರ ಗ್ರಾಮದ ಅಜಿತ್ ಎಂದು ಗುರುತಿಸಲಾಗಿದೆ. ಕುಸ್ತಿಪಟುವಾಗಿರುವ ಅಜಿತ್, ಶಿಕ್ಷಕನಾಗುವ ಗುರಿ ಹೊಂದಿದ್ದು, ಉತ್ತರ ಪ್ರದೇಶ ವಿಶ್ವವಿದ್ಯಾಲಯವೊಂದರಲ್ಲಿಬಿ.ಎಡ್ ಮಾಡುತ್ತಿದ್ದಾನೆ ಎಂದು ದೆಹಲಿ ಡಿಸಿಪಿ (ಕ್ರೈಂ) ರಾಜೇಶ್ ದಿಯೊ ತಿಳಿಸಿದ್ದಾರೆ.

ಶಾಹೀನ್‌ಬಾಗ್ ಹಸುಳೆ ಸಾವು

ಶಾಹೀನ್‌ಬಾಗ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ತಾಯಿಯೊಂದಿಗೆ ಪಾಲ್ಗೊಂಡಿದ್ದ 4 ತಿಂಗಳ ಮಗು ನಿಧನವಾಗಿದೆ.

‘ತೀವ್ರ ಚಳಿಯನ್ನು ತಾಳಲಾರದೇ ನನ್ನ ಮಗ ಮೊಹಮ್ಮದ್ ಜಹಾನ್ ಜ.30ರಂದು ನಿದ್ದೆಯಲ್ಲೇ ಸಾವನ್ನಪ್ಪಿದ’ ಎಂದು ಮಗುವಿನ ತಾಯಿ, ಪ್ರತಿಭಟನಕಾರ್ತಿ ನಾಜಿಯಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT