ಶುಕ್ರವಾರ, ಸೆಪ್ಟೆಂಬರ್ 20, 2019
21 °C

ದೌರ್ಜನ್ಯ ಪ್ರಕರಣ | ಕ್ರಿಕೆಟಿಗ ಮೊಹಮದ್‌ ಶಮಿಗೆ ಬಂಧನ ವಾರಂಟ್‌

Published:
Updated:

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಮೊಹಮ್ಮದ್ ಶಮಿ ಅವರ ವಿರುದ್ಧ ಪತ್ನಿ ಹಸೀನ್ ಜಹಾನ್ 2018ರಲ್ಲಿ ದಾಖಲಿಸಿರುವ ವರದಕ್ಷಿಣೆ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾದ ಅಲಿಪೋರ್ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದೆ.

ಜಹಾನ್‌ ನೀಡಿದ ದೂರಿನನ್ವಯ ಶಮಿ ಮತ್ತು ಆತನ ಸೋದರನ ವಿರುದ್ಧ ಐಪಿಸಿ ಸೆಕ್ಷನ್‌ 498ಎ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಶರಣಾಗಲು ಮತ್ತು ಜಾಮೀನು ಅರ್ಜಿ ಸಲ್ಲಿಸಲು ಶಮಿಗೆ 15 ದಿನಗಳ ಕಾಲಾವಕಾಶವಿದೆ. ಈ ಮಧ್ಯೆ ಪ್ರಕರಣ ಸಂಬಂಧಿ ಪ್ರತಿಕ್ರಿಯಿಸಿರುವ ಬಿಸಿಸಿಐ ಚಾರ್ಜ್‌ಶೀಟ್‌ ದಾಖಲಾಗುವವರೆಗೆ ಶಮಿ ವಿರುದ್ಧ ಯಾವುದೇ ಕ್ರಮಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

 

Post Comments (+)