ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗಿದ್ದರು ಅರುಣ್‌ ಜೇಟ್ಲಿ...

Last Updated 25 ಆಗಸ್ಟ್ 2019, 11:27 IST
ಅಕ್ಷರ ಗಾತ್ರ

ರಾಜಕಾರಣದಲ್ಲಿ ಎಂದಿಗೂ ವೈಯಕ್ತಿಕ ಟೀಕೆಗೆ ಇಳಿಯದ ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರಿಗೆ, ತಮ್ಮ ಪಕ್ಷಕ್ಕಿಂತ ಬೇರೆ ಪಕ್ಷದಲ್ಲೇ ಹೆಚ್ಚಿನ ಸ್ನೇಹಿತರಿದ್ದರು. ರಾಜಕಾರಣದ ಹೊರತಾಗಿ ಬೇರೆ–ಬೇರೆ ಕ್ಷೇತ್ರಗಳಲ್ಲೂ ಆಸಕ್ತಿ ಹೊಂದಿದ್ದ ಜೇಟ್ಲಿ, ತಮ್ಮ ಪರಿಚಯಕ್ಕೆ ಬಂದವರನ್ನು ಮರೆಯುತ್ತಿರಲಿಲ್ಲ ಎನ್ನುತ್ತಾರೆ ಅವರ ಆಪ್ತರು

* ಪತ್ರಕರ್ತರ ಜತೆ ಜೇಟ್ಲಿ ಉತ್ತಮ ಒಡನಾಟ ಇರಿಸಿಕೊಂಡಿದ್ದರು. ಸಂಸತ್ತಿನ ಅಧಿವೇಶನದ ಕಲಾಪದ ಅವಧಿ ಮುಗಿದ ನಂತರ ಸೆಂಟರ್‌ ಹಾಲ್‌ನಲ್ಲಿ ಜೇಟ್ಲಿ ಅವರು ಪತ್ರಕರ್ತರ ಜತೆ ಮಾತಿಗೆ ಕೂರುತ್ತಿದ್ದರು. ಬ್ರೆಡ್‌ ಟೋಸ್ಟ್‌ ಮತ್ತು ಕಾಫಿ ಸೇವಿಸುತ್ತಾ ಜೇಟ್ಲಿ ಅವರು ನೀಡುತ್ತಿದ್ದ ‘ಆಫ್‌ ದಿ ರೆಕಾರ್ಡ್‌’ ಮಾಹಿತಿಗಾಗಿ ಪತ್ರಕರ್ತರು ಕಾತರದಿಂದ ಕಾದಿರುತ್ತಿದ್ದರು

* ದುಬಾರಿ ಕೈಗಡಿಯಾರ ಮತ್ತು ಕಾಶ್ಮೀರದ ಪಶ್ಮೀನಾ ಶಾಲುಗಳ ಬಗ್ಗೆ ಜೇಟ್ಲಿ ಅವರಿಗೆ ಅತೀವ ಒಲವು. ಅವರ ಸಂಗ್ರಹದಲ್ಲಿ ಇವು ಹೆಚ್ಚಿನ ಸಂಖ್ಯೆಯಲ್ಲಿದ್ದವು. ಅವರ ಕೈಯಲ್ಲಿ ಹೊಸ ಗಡಿಯಾರ ಇದ್ದರೆ, ‘ಸರ್, ಅದರ ಬೆಲೆ ಎಷ್ಟು’ ಎಂಬ ಪ್ರಶ್ನೆ ಜೇಟ್ಲಿಗೆ ಎದುರಾಗುತ್ತಿತ್ತು. ಅವರು ಎಂದೂ ಆ ಮಾಹಿತಿ ನೀಡುತ್ತಿರಲಿಲ್ಲ. ಬದಲಿಗೆ ಮುಗುಳ್ನಗುತ್ತಿದ್ದರು ಅಷ್ಟೆ

* ಜೇಟ್ಲಿ ಕ್ರಿಕೆಟ್‌ ಪ್ರಿಯ ಎಂಬುದು ಜನಜನಿತವಾದ ಮಾತು. ಅವರು ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಆದರೆ ಅವರು ಕ್ರಿಕಟ್‌ನಷ್ಟೇ ಟಿನಿಸ್ ಅನ್ನೂ ಪ್ರೀತಿಸುತ್ತಿದ್ದರು. ಪ್ರತಿವರ್ಷ ಜೂನ್‌ನಲ್ಲಿ ಅವರು ವಿಂಬಲ್ಡನ್‌ ಪಂದ್ಯಾವಳಿಯನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ

* ದೆಹಲಿಯ ಲೋಧಿ ಗಾರ್ಡನ್‌ನಲ್ಲಿ ಇನ್ನು ಮುಂದೆ ಜೇಟ್ಲಿ ಅವರ ಅನುಪಸ್ಥಿತಿ ಕಾಡಲಿದೆ. ದೆಹಲಿಯಲ್ಲಿ ಇದ್ದಾಗ ಪ್ರತಿದಿನ ಬೆಳಿಗ್ಗೆ ವಾಯುವಿಹಾರಕ್ಕೆ ಲೋಧಿ ಗಾರ್ಡನ್‌ಗೆಜೇಟ್ಲಿ ಬರುತ್ತಿದ್ದರು, ಸ್ನೇಹಿತರೊಂದಿಗೆ ಹೆಜ್ಜೆ ಹಾಕುತ್ತಿದ್ದರು. ನಡಿಗೆಯ ನಂತರ ಚಹಾ, ಉಪಾಹಾರ ಇರುತ್ತಿತ್ತು

* ರಾಜಕೀಯದಲ್ಲಿ ಜೇಟ್ಲಿ ವಾಗ್ವಾದ ನಡೆಸಿದ ಮತ್ತು ಅಸಮಾಧಾನ ವ್ಯಕ್ತಪಡಿಸಿದ ಎರಡು ಘಟನೆಗಳಷ್ಟೇ ಸುದ್ದಿ ಮಾಡಿವೆ. ತಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ವಿರುದ್ಧ ಜೇಟ್ಲಿ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದರು. ಪಕ್ಷಕ್ಕಾಗಿ ದುಡಿಯದವರಿಗೆ ದೊಡ್ಡ ಹುದ್ದೆಗಳನ್ನು ನೀಡಿದ್ದಕ್ಕೆ ಬಿಜೆಪಿಯ ಅಧ್ಯಕ್ಷರಾಗಿದ್ದ ರಾಜನಾಥ್ ಸಿಂಗ್‌ ವಿರುದ್ಧ ಜೇಟ್ಲಿ ಕಿಡಿಕಾರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT