ಮಂಗಳವಾರ, ಮೇ 18, 2021
30 °C

ವಿಶ್ವ ಪಾರಂಪರಿಕ ದಿನಾಚರಣೆಯಲ್ಲಿ ಕೋವಿಡ್ 19 ಜಾಗೃತಿ ಮೂಡಿಸಿದ ಪುರಾತತ್ವ ಇಲಾಖೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಏಪ್ರಿಲ್ 18 ವಿಶ್ವ ಪಾರಂಪರಿಕ ದಿನಾಚರಣೆಯನ್ನು ಭಾರತೀಯ ಪುರಾತತ್ವ ಇಲಾಖೆ ದೆಹಲಿ ಸೇರಿದಂತೆ ದೇಶದ ವಿಶ್ವಪ್ರಸಿದ್ಧ ಕಟ್ಟಡಗಳಲ್ಲಿ ದೀಪ ಬೆಳಗಿಸುವ ಜೊತೆಗೆ ಕೋವಿಡ್ 19 ಕುರಿತು ಜನರಿಗೆ ಜಾಗೃತಿ ಮೂಡಿಸುವ ಮೂಲಕ ಆಚರಿಸಿತು.

ಶನಿವಾರ ರಾತ್ರಿ ಈ ವಿಶೇಷ ದಿನದ ಅಂಗವಾಗಿ ನವದೆಹಲಿ, ಕೊಲ್ಕೊತಾ, ಪಶ್ಚಿಮ ಬಂಗಾಳದಲ್ಲಿರುವ ವಿಶ್ವ ಪ್ರಸಿದ್ಧ ಕಟ್ಟಡಗಳಲ್ಲಿ ವಿಶೇಷ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿತ್ತು.

ಈ ಸಮಯದಲ್ಲಿ 'STAY HOME STAY SAFE'(ಮನೆಯಲ್ಲೇ ಇರಿ, ಸುರಕ್ಷತೆಯಿಂದಿರಿ) ಎಂಬ ಅಕ್ಷರಗಳಿಗೆ ದೀಪಾಲಂಕಾರ ಮಾಡುವ ಮೂಲಕ ಕೊರೊನಾ ಸೋಂಕು ಹರಡದಂತೆ ಸಂದೇಶ ಸಾರುವ ವ್ಯವಸ್ಥೆ ಮಾಡಲಾಗಿತ್ತು. ಇದಲ್ಲದೆ, ದೆಹಲಿಯ ಕೆಂಪುಕೋಟೆ, ಖುತುಬ್ ಮಿನಾರ್, ಹುಮಾಯೂನ್ ಸ್ಮಾರಕ, ಪಶ್ಚಿಮ ಬಂಗಾಳದ ಕೂಚ್ ಬೆಹರ್ ಅರಮನೆ ಸೇರಿದಂತೆ ವಿವಿಧ ಪಾರಂಪರಿಕ ಕಟ್ಟಡಗಳಿಗೆ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿತ್ತು.

 

ದೆಹಲಿಯ ಕೆಂಪುಕೋಟೆಯಲ್ಲಿ ದೀಪಾಲಂಕಾರದಲ್ಲಿಯೇ 'HUM JEETENGEY'(ಗೆದ್ದೇ ಗೆಲ್ಲುತ್ತೇವೆ)ಎಂಬ ಅಕ್ಷರಗಳನ್ನು ಭಾರತದ ಭೂಪಟದಲ್ಲಿ ನಿರ್ಮಿಸಿದ್ದುದು ಗಮನ ಸೆಳೆಯುತ್ತಿತ್ತು. ಈ ಸಂಬಂಧ ಟ್ವೀಟ್ ಮಾಡಿರುವ ಭಾರತೀಯ ಪುರಾತತ್ವ ಇಲಾಖೆ, ದೇಶದಲ್ಲಿ ತಲೆದೋರಿರುವ ಕೊರೋನಾ ಸೋಂಕು ಸಮಸ್ಯೆಯಂತಹ ಕಷ್ಟದ ಸಮಯದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ಸಂದೇಶವನ್ನು ಕೆಂಪು ಕೋಟೆಯ ಮೇಲೆ ಬೆಳಗಿಸಲಾಗಿದೆ. ಅಲ್ಲದೆ, ದೆಹಲಿಯ ಹುಮಾಯೂನ್ ಸ್ಮಾರಕದಲ್ಲಿ ಕೊರೊನಾ ಸೋಂಕಿನಿಂದ 41 ದಿನಗಳ ಲಾಕ್ ಡೌನ್‌‌ನ ನೆನಪಿಗಾಗಿ 41 ಮೊಂಬತ್ತಿಗಳನ್ನು ಬೆಳಗಿಸಲಾಗಿದೆ. ಒಂದೊಂದು ಮೊಂಬತ್ತಿ ಒಂದೊಂದು ದಿನದ ಕತ್ತಲನ್ನು ಓಡಿಸುವ ಸಂಕೇತವಾಗಿದೆ ಎಂದು ತಿಳಿಸಿದೆ.


ವಿಶ್ವ ಪಾರಂಪರಿಕ ದಿನಾಚರಣೆಯ ಅಂಗವಾಗಿ ವಿಶ್ವಪ್ರಸಿದ್ಧ ಕಟ್ಟಡಗಳಿಗೆ ದೀಪಾಲಂಕಾರ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು