ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೊನಾಲ್ಡ್‌ ಟ್ರಂಪ್‌ ಟ್ವೀಟ್‌ಗೆ ಅಸ್ಸಾಂ ಯುವತಿ ಆಸ್ಥಾ ಕಮೆಂಟ್‌

Last Updated 27 ನವೆಂಬರ್ 2018, 20:27 IST
ಅಕ್ಷರ ಗಾತ್ರ

ಗುವಾಹಟಿ: ಜಾಗತಿಕ ತಾಪಮಾನ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾಡಿದ್ದ ಟ್ವೀಟ್‌ಗೆ, ಅಸ್ಸಾಂನ ಯುವತಿ ಆಸ್ಥಾ ಸರ್ಮಾಹ್ (18) ಕಮೆಂಟ್ ಮಾಡಿದ್ದು, ‘ಹವಾಮಾನ ಮತ್ತು ತಾಪಮಾನ ಎರಡೂ ಒಂದೇ ಅಲ್ಲ’ ಎಂದು ಹೇಳಿದ್ದಾಳೆ.

ನವೆಂಬರ್ 21ರಂದು ವಾಷಿಂಗ್ಟನ್‌ನಲ್ಲಿ ಉಷ್ಣಾಂಶ ಮೈನಸ್ 2 ಡಿಗ್ಸಿ ಸೆಲ್ಸಿಯಸ್‌ ಇದ್ದಾಗ ಟ್ವೀಟ್‌ ಮಾಡಿದ್ದ ಟ್ರಂಪ್‌, ‘ಭಯಾನಕ. ಜಾಗತಿಕ ತಾಪಮಾನದ ಎಲ್ಲ ದಾಖಲೆಗಳನ್ನೂ ಇದು ಮುರಿಯಬಹುದು’ ಎಂದಿದ್ದರು.

ಆಸ್ಥಾ, ‘ನಾನು ನಿಮಗಿಂತಲೂ 54 ವರ್ಷ ಕಿರಿಯಳು. ಸಾಧಾರಣ ಅಂಕಗಳೊಂದಿಗೆ ಈಗಷ್ಟೇ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದೇನೆ. ಆದರೆ ನಿಮಗೆ ಈ ಕುರಿತು ಸಹಾಯ ಬೇಕಿದ್ದರೆ, ನಾನು ಎರಡನೇ ತರಗತಿಯಿಂದ ಬಳಸುತ್ತಿರುವ ಎನ್‌ಸೈಕ್ಲೊಪೀಡಿಯಾ ನಿಮಗೆ ನೀಡಬಲ್ಲೆ’ ಎಂದಿದ್ದಾಳೆ.ಆಕೆಯ ಕಮೆಂಟ್‌ಗೆ ಜಗತ್ತಿನಾದ್ಯಂತ 22 ಸಾವಿರ ಮಂದಿ ಲೈಕ್‌ ಮಾಡಿದ್ದು, 5,100 ಬಾರಿ ಅದು ರಿಟ್ವೀಟ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT