ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಸ್ತ್ರಾಸ್ತ್ರ ತರಬೇತಿ ಆರೋಪ ಬಜರಂಗದಳ ನಿರಾಕರಣೆ

Last Updated 2 ಜೂನ್ 2019, 19:45 IST
ಅಕ್ಷರ ಗಾತ್ರ

ಮುಂಬೈ/ಠಾಣೆ: ಮುಂಬೈ ಹೊರವಲಯದ ಮೀರಾ ರಸ್ತೆಯ ಶಾಲೆಯೊಂದರಲ್ಲಿ ಬಜರಂಗದಳ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದೆ ಎಂಬ ವಿಷಯ ಭಾನುವಾರ ವಿವಾದಕ್ಕೆ ಕಾರಣವಾಯಿತು. ಡಿವೈಎಫ್‌ಐ ಕಾರ್ಯಕರ್ತರು ಈ ಕುರಿತು ಪೊಲೀಸರಿಗೆ ದೂರು ನೀಡಿದರು.

ಜನರು ರೈಫಲ್ ಒಯ್ಯುತ್ತಿರುವ ಛಾಯಾಚಿತ್ರಗಳು ವೈರಲ್‌ ಆಗಿದ್ದವು. ಬಿಜೆಪಿ ಶಾಸಕ ನರೇಂದ್ರ ಮೆಹ್ತಾರಿಗೆ ಸೇರಿದ ಸೆವೆನ್‌ ಇಲೆವೆನ್‌ ಅಕಾಡೆಮಿಯಲ್ಲಿ ತರಬೇತಿ ನೀಡುತ್ತಿದ್ದು, ಇದಕ್ಕಾಗಿ ಕಟ್ಟಡವನ್ನು ಬಜರಂಗದಳಕ್ಕೆ ಬಾಡಿಗೆಗೆ ನೀಡಲಾಗಿದೆ ಎಂದು ಆರೋಪಿಸಲಾಗಿತ್ತು.

‘ತರಬೇತಿಯಲ್ಲಿ ಕತ್ತಿ ಅಥವಾ ರೈಫಲ್‌ ಅನ್ನು ಇಲ್ಲಿ ಬಳಕೆ ಮಾಡಿಲ್ಲ ಎಂದುಆರಂಭಿಕ ಹಂತದ ತನಿಖೆಯಲ್ಲಿ ತಿಳಿದುಬಂದಿದೆ. ಈ ಫೋಟೊ ಎಲ್ಲಿಯವು ಎಂದು ತನಿಖೆ ನಡೆದಿದೆ’ ಎಂದುಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅತುಲ್‌ ಕುಲಕರ್ಣಿ ಅವರು ತಿಳಿಸಿದರು.

ಬಜರಂಗದಳ ಪ್ರತಿಕ್ರಿಯೆ:ಠಾಣೆ ಜಿಲ್ಲೆಯಲ್ಲಿ ತರಬೇತಿ ಕಾರ್ಯಕ್ರಮದಲ್ಲಿ ಶಸ್ತ್ರಾಸ್ತ್ರ ಬಳಸಿಲ್ಲ ಎಂದು ಬಜರಂಗದಳ ಸ್ಪಷ್ಟಪಡಿಸಿದೆ. ಕೊಂಕಣ ವಲಯದ ಸಂಯೋಜಕ ಸಂದೀಪ್‌ ಭಗತ್‌, ‘ಆರೋಪ ಒಂದು ರಾಜಕೀಯ ಸಂಚು. ಕೆಲ ಕಾರ್ಯಕರ್ತರು ಏರ್‌ ಗನ್‌ ತಂದಿದ್ದರು. ಅದಕ್ಕೆ ಪರವಾನಗಿಅಗತ್ಯವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT