ಮಂಗಳವಾರ, ಏಪ್ರಿಲ್ 13, 2021
30 °C

ಗೋ ಕಳ್ಳಸಾಗಣೆದಾರರಿಂದ ಬಾಂಬ್‌ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಗೋ ಕಳ್ಳಸಾಗಣೆದಾರರ ಬಾಂಬ್‌ ದಾಳಿಗೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಯೋಧರೊಬ್ಬರ ಕೈ ತುಂಡಾಗಿದ್ದು, ಶ್ವಾಸಕೋಶ ಮತ್ತು ಹೊಟ್ಟೆಗೆ ‘ಪೆಲೆಟ್‌’ಗಳು ಹೊಕ್ಕಿವೆ.

ಉತ್ತರ 24 ಪರಗಣ ಜಿಲ್ಲೆಯ ಭಾರತ– ಬಾಂಗ್ಲಾದೇಶ ಗಡಿ ಚೆಕ್‌ಪೋಸ್ಟ್ ಆಂಗ್ರೈಲ್‌ನಲ್ಲಿ ಗುರುವಾರ ಬೆಳಗಿನ ಜಾವ 3.30 ಗಂಟೆಗೆ ದುರ್ಘಟನೆ ನಡೆದಿದೆ. ಯೋಧ ಅನಿಸೂರ್‌ ರೆಹಮಾನ್‌ ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದು, ಬಾಂಗಾಂವ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾಂಗ್ಲಾದೇಶದ 25 ಕಳ್ಳಸಾಗಣೆದಾರರು ಚೆಕ್‌ಪೋಸ್ಟ್‌ಗೆ 200 ಮೀ. ದೂರದಲ್ಲಿ ಭಾರತದಿಂದ ಕರೆತಂದಿದ್ದ ಗೋವುಗಳೊಂದಿಗೆ ಬಂದಿದ್ದರು. ಚೆಕ್‌ಪೋಸ್ಟ್ ಸಮೀಪ ಬರುತ್ತಿದ್ದಂತೆ ನಾಡಬಾಂಬ್‌ ದಾಳಿ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಬಾಂಗ್ಲಾದೇಶದ ಗಡಿ ಭದ್ರತಾ ಪಡೆ (ಬಿಜಿಬಿ) ಕಳ್ಳಸಾಗಣೆದಾರರನ್ನು ಹಿಡಿಯಲು ಪ್ರಯತ್ನಿಸಲಿಲ್ಲ ಎಂದು ಬಿಎಸ್‌ಎಫ್‌ ಆರೋಪಿಸಿದ್ದು, ಪಶ್ಚಿಮ ಬಂಗಾಳದ ದಕ್ಷಿಣದ ಗಡಿಯುದ್ದಕ್ಕೂ ಪ್ರತಿಭಟನೆ ದಾಖಲಿಸಿದೆ ಹಾಗೂ ಘಟನೆಯನ್ನು ಖಂಡಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು