7

ಪ್ರಿನ್ಸಿಪಾಲ,ಶಿಕ್ಷಕರು,15 ಸಹಪಾಠಿಗಳಿಂದ ಅತ್ಯಾಚಾರ: ವಿದ್ಯಾರ್ಥಿನಿ ದೂರು

Published:
Updated:
ಸಾಂದರ್ಭಿಕ ಚಿತ್ರ

ಸರನ್‌(ಬಿಹಾರ): ಪ್ರಿನ್ಸಿಪಾಲ, ಇಬ್ಬರು ಶಿಕ್ಷಕರು ಮತ್ತು ತನ್ನ ಸಹಪಾಠಿಗಳಿಂದಲೇ ಕಳೆದೆಂಟು ತಿಂಗಳಲ್ಲಿ ಹಲವು ಬಾರಿ ಅತ್ಯಾಚಾರಕ್ಕೆ ಒಳಗಾಗಿರುವುದಾಗಿ ಇಲ್ಲಿನ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ದೂರು ದಾಖಲಿಸಿದ್ದಾಳೆ.

ವಿಷಯ ಬಹಿರಂಗಗೊಂಡರೆ ಸಮಾಜದಲ್ಲಿ ಬಹಿಷ್ಕಾರ ಹಾಕುತ್ತಾರೆ ಎಂಬ ಭಯದಿಂದ ಈವರೆಗೂ ದೂರು ನೀಡಿರಲಿಲ್ಲ ಎಂದು ಬಾಲಕಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. 

ಶುಕ್ರವಾರ ಬೆಳಿಗ್ಗೆ ನೀಡಿದ ದೂರಿನನ್ವಯ ಶಾಲೆಯ ಪ್ರಾಂಶುಪಾಲ ಉದಯ್‌ ಕುಮಾರ್‌ ಅಲಿಯಾಸ್ ಮುಕುಂದ್‌ ಸಿಂಗ್‌, ಶಿಕ್ಷಕ ಬಾಲಾಜಿ ಮತ್ತು ಇಬ್ಬರು ಬಾಲಕರನ್ನು ಬಂಧಿಸಲಾಗಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿ, ಉಳಿದ ಆರೋಪಿಗಳ ಬಂಧನಕ್ಕೆ ಹುಡುಕಾಟ ನಡೆದಿದೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ. 

ಶಾಲೆಯ ಶೌಚಾಲಯದಲ್ಲಿ 2017ರ ಡಿಸೆಂಬರ್‌ನಲ್ಲಿ ಮೂವರು ಸಹಪಾಠಿಗಳು ನನ್ನ ಮೇಲೆ ಅತ್ಯಾಚಾರ ಮಾಡಿದರು. ಅದನ್ನು ಚಿತ್ರೀಕರಿಸಿಕೊಂಡರು. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ವಿಡಿಯೊವನ್ನು ಬಹಿರಂಗಪಡಿಸುವುದಾಗಿ ಬಾಲಕಿಗೆ ಹೆದರಿಸಿದ್ದರು ಎಂಬ ಅಂಶ ಎಫ್‌ಐಆರ್‌ನಲ್ಲಿದೆ. 

ಕೆಲವು ದಿನಗಳ ಬಳಿಕ, ಆರೋಪಿ ಅಪ್ರಾಪ್ತರು ವಿಡಿಯೊವನ್ನು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ. ಅದು ಕೆಲವು ಶಿಕ್ಷಕರಿಗೂ ಹೋಗಿದೆ. ಅದರಿಂದ ಇಬ್ಬರು ಶಿಕ್ಷಕರು ಬ್ಲಾಕ್‌ಮೇಲ್‌ ಮಾಡಿ ಲೈಂಗಿಕ ಕ್ರಿಯೆಗೆ ಬಳಸಿಕೊಂಡರು ಎಂದು ಬಾಲಕಿ ಆರೋಪಿಸಿದ್ದಾಳೆ. 

ಆರೋಪಿತ ಶಿಕ್ಷಕರಿಂದ ಕಿರುಕುಳ ಹೆಚ್ಚಾದಾಗ ಆತಂಕಗೊಂಡ ಬಾಲಕಿ ಸಹಾಯಕ್ಕಾಗಿ ವಿಷಯವನ್ನು ಪ್ರಾಂಶುಪಾಲರ ಗಮನಕ್ಕೆ ತಂದಿದ್ದಾಳೆ. ಈ ಕುರಿತು ತಕ್ಷಣ ದೂರು ದಾಖಲಿಸುವ ಬದಲು, ‘ವಿಷಯ ಬಹಿರಂಗಗೊಂಡರೆ ನಿನ್ನ ಮರ್ಯಾದೆ ಮತ್ತು ಶಾಲೆಯ ಗೌರವವೂ ಹಾಳಾಗುತ್ತದೆ’ ಎಂದು ಆತ ಬಾಲಕಿಯ ಬಾಯಿ ಮುಚ್ಚಿಸಿದ್ದಾರೆ. ಒಂದು ದಿನ ಶಾಲೆ ಮುಗಿದ ಬಳಿಕ ಬಾಲಕಿಯನ್ನು ಕರೆದು, ತನ್ನ ಚೆಂಬರ್‌ನಲ್ಲಿಯೇ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. 

ಬಾಲಕಿ ಎಫ್‌ಐಆರ್‌ನಲ್ಲಿ ದಾಖಲಿಸಿರುವ 18 ದುಷ್ಕರ್ಮಿಗಳನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿದೆ. 

ಬಿಹಾರದಲ್ಲಿ ಕೆಲವು ತಿಂಗಳಿಂದ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಈ ವರ್ಷದ ಮಾರ್ಚ್‌ ಅಂತ್ಯದ ವರೆಗೆ 127 ಅತ್ಯಾಚಾರ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿದ್ದವು. ಈ ಸಂಖ್ಯೆ ಜೂನ್‌ ಅಂತ್ಯದವರೆಗೆ ದ್ವಿಗುಣಗೊಂಡಿದೆ ಎನ್ನುತ್ತವೆ ಮೂಲಗಳು.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 1

  Sad
 • 1

  Frustrated
 • 3

  Angry

Comments:

0 comments

Write the first review for this !