ಬುಧವಾರ, ಏಪ್ರಿಲ್ 14, 2021
24 °C

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೋಸ ಮಾಡಿ ಗೆದ್ದಿತ್ತು: ಮಮತಾ ಬ್ಯಾನರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲ್ಕತ್ತ: ಲೋಕಸಭಾ ಚುನಾವಣೆಯಲ್ಲಿ ಮೋಸ ಮಾಡಿ ಬಿಜೆಪಿ ಗೆದ್ದಿದೆ ಎಂದು  ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೊಲ್ಕತ್ತದಲ್ಲಿ ಭಾನುವಾರ ಆಯೋಜಿಸಿದ್ದ ಮೆಗಾ ರ‍್ಯಾಲಿಯಲ್ಲಿ ಮಮತಾ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

ಇವಿಎಂ, ಸಿಆರ್‌ಪಿಎಫ್ ಮತ್ತು ಚುನಾವಣಾ ಆಯೋಗ ಬಳಸಿ ಮೋಸಮಾಡಿ ಬಿಜೆಪಿ ಲೋಕಸಭಾ ಚುನಾವಣೆ ಗೆದ್ದಿದೆ. ಅವರಿಗೆ ಸಿಕ್ಕಿದ್ದು ಕೇವಲ18 ಸೀಟು, ಇಷ್ಟು ಸೀಟು ಸಿಕ್ಕಿದ್ದಕ್ಕೆ ಅವರು ನಮ್ಮ ಪಕ್ಷದ ಕಚೇರಿ ಮೇಲೆ ದಾಳಿ ಮಾಡಲು ಯತ್ನಿಸಿದ್ದು ಜನರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಮತಾ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 2014ರಲ್ಲಿ ಗೆಲುವು ಸಾಧಿಸಿದ ಸೀಟುಗಳ ಒಂಭತ್ತು ಪಟ್ಟು ಸೀಟು ಗೆದ್ದುಕೊಂಡಿದೆ. ಇತ್ತ ಟಿಎಂಸಿ 2014ರಲ್ಲಿ  34 ಸೀಟು ಗೆದ್ದಿದ್ದು  2019ರಲ್ಲಿ 22 ಸೀಟು ಗೆದ್ದುಕೊಂಡಿತ್ತು.

ಹುತಾತ್ಮರ ದಿನದ ಅಂಗವಾಗಿ ಕೊಲ್ಕತ್ತದಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಮತಾ ಬಿಜೆಪಿ ನೇತೃತ್ವದ ಸರ್ಕಾರ ರ‍್ಯಾಲಿಗೆ ಭಂಗ ತರಲು ಯತ್ನಿಸುತ್ತಿದೆ ಎಂದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ  ಪಂಚಾಯತ್ ಚುನಾವಣೆ ಮತಪತ್ರ ಬಳಸಿ ನಡೆಸುವಂತೆ ತಾನು ಚುನಾವಣಾ ಆಯೋಗಕ್ಕೆ ಮನವಿ ಮಾಡಲಿದ್ದೇನೆ ಎಂದು ಮಮತಾ ಹೇಳಿದ್ದಾರೆ.

1993, ಜುಲೈ 21ರಂದು  ಪೊಲೀಸರ ಗುಂಡೇಟಿಗೆ 13 ಯುವ ಕಾಂಗ್ರೆಸ್ಸಿಗರು ಬಲಿಯಾಗಿದ್ದರು. ಆವಾಗ ಮಮತಾ ಬ್ಯಾನರ್ಜಿ ಯುವ ಕಾಂಗ್ರೆಸ್ ನಾಯಕಿಯಾಗಿದ್ದರು. ಪ್ರತಿ ವರ್ಷವೂ ಪಶ್ಚಿಮ ಬಂಗಾಳದಲ್ಲಿ ಜುಲೈ 21ರಂದು ಹುತಾತ್ಮರ ದಿನಾಚರಣೆ ನಡೆಯುತ್ತಿದೆ.
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು