ಸೋಮವಾರ, ಆಗಸ್ಟ್ 26, 2019
22 °C

ಉನ್ನಾವ್ ಅತ್ಯಾಚಾರ ಆರೋಪಿ ಶಾಸಕ ಕುಲ್‌ದೀಪ್ ಸೆಂಗಾರ್‌ನ್ನು ಉಚ್ಛಾಟಿಸಿದ ಬಿಜೆಪಿ

Published:
Updated:

ಲಖನೌ: ಉನ್ನಾವ್ ಅತ್ಯಾಚಾರ ಪ್ರಕರಣದ ಆರೋಪಿ ಕುಲ್‌ದೀಪ್ ಸೆಂಗಾರ್‌ನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಿದೆ. 
ಅತ್ಯಾಚಾರ ಪ್ರಕರಣ ಮಾತ್ರವಲ್ಲದೆ ಸಂತ್ರಸ್ತೆಯ ಕಾರು ಅಪಘಾತ ಪ್ರಕರಣದಲ್ಲಿಯೂ ಕುಲ್‌ದೀಪ್ ಆರೋಪಿಯಾಗಿದ್ದಾರೆ.  ಹೀಗಿರುವಾಗಲೂ ಬಿಜೆಪಿ ಇವರನ್ನು ಪಕ್ಷದಿಂದ ಯಾಕೆ ಉಚ್ಛಾಟಿಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದರು.

ಇದನ್ನೂ ಓದಿಉನ್ನಾವೊ ಅತ್ಯಾಚಾರ ಸಂತ್ರಸ್ತೆ ಸಂಚರಿಸುತ್ತಿದ್ದ ಕಾರು ಅಪಘಾತ: ಪರಿಸ್ಥಿತಿ ಗಂಭೀರ

ಉನ್ನಾವ್ ಪ್ರಕರಣದ ಆರೋಪಿ ಶಾಸಕ ಕುಲ್‌ದೀಪ್ ಸೆಂಗಾರ್‌ನ್ನು ಪಕ್ಷದಿಂದ ಇಲ್ಲಿಯವರೆಗೆ ಯಾಕೆ ಉಚ್ಛಾಟಿಸಿಲ್ಲ? ಅವರ ವಿರುದ್ಧ ಬಿಜೆಪಿ ಯಾಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಜನರು  ಬಿಜೆಪಿಯನ್ನು ಪ್ರಶ್ನಿಸಿದ್ದರು.

ಸಾರ್ಜನಿಕರ ಒತ್ತಾಯಕ್ಕೆ ಮಣಿದ ಬಿಜೆಪಿ ಶಾಸಕರನ್ನು ಪಕ್ಷದಿಂದ ಉಚ್ಛಾಟಿಸಿರುವುದಾಗಿ ಗುರುವಾರ ಹೇಳಿದೆ. ಈ ಹಿಂದೆ ಶಾಸಕನ ವಿರುದ್ಧ ಕ್ರಮ ಯಾಕೆ ತೆಗೆದುಕೊಂಡಿಲ್ಲ ಎಂದು ಉತ್ತರ ಪ್ರದೇಶದ ಬಿಜೆಪಿ ಘಟಕವನ್ನು ಪ್ರಶ್ನಿಸಿದಾಗ ಸೆಂಗಾರ್‌ನ್ನು ಬಹಳ ಹಿಂದೆಯೇ ಅಮಾನತು ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷರು ಹೇಳಿದ್ದರು. ಆದರೆ ಯಾವಾಗ ಅಮಾನತು ಮಾಡಿದ್ದು? ಎಂಬ ಪ್ರಶ್ನೆಗೆ ಬಿಜೆಪಿ ಉತ್ತರಿಸಿರಲಿಲ್ಲ.

ಇದನ್ನೂ ಓದಿಬಹಳ ಹಿಂದೆಯೇ ಕುಲ್‌ದೀಪ್ ಸೆಂಗಾರ್‌ನ್ನು ಪಕ್ಷದಿಂದ ಅಮಾನತು ಮಾಡಿದ್ದೆವು: ಬಿಜೆಪಿ

ಯುವತಿಯ ಮೇಲಿನ ಅತ್ಯಾಚಾರ ಬಗ್ಗೆ ಪೊಲೀಸರು ಜಡ ನಿಲುವು ಮತ್ತು ಆಡಳಿತ ಇಲಾಖೆ ಅಸಡ್ಡೆ ವಹಿಸಿತ್ತು.ಇತ್ತ  ಸಂತ್ರಸ್ತೆಯ ಕುಟುಂಬ ಅಸಹಾಯಕತೆಯಿಂದ ಕಷ್ಟ ಅನುಭವಿಸುತ್ತಿದ್ದರೆ ಆರೋಪಿ ಶಾಸಕ ಆರಾಮವಾಗಿರುತ್ತಿದ್ದರು. ಪ್ರಕರಣ ನಡೆದು ಒಂದು ವರ್ಷದ ನಂತರವೇ ಆಡಳಿತರೂಡ ಪಕ್ಷ ಆರೋಪಿಯನ್ನು ಬಂಧಿಸಿತ್ತು. ಕಳೆದ ಭಾನುವಾರ ಸಂತ್ರಸ್ತೆಯ ಕಾರು ಅಪಘಾತವಾದಾಗ ಉನ್ನಾವ್ ಅತ್ಯಾಚಾರ ಪ್ರಕರಣ ಸುದ್ದಿ ಮತ್ತೆ ಮುನ್ನೆಲೆಗೆ ಬಂತು.

ಇದನ್ನೂ ಓದಿಉನ್ನಾವ್ ಅತ್ಯಾಚಾರ: ಆರೋಪ ಹೊರಿಸಿದ್ದಕ್ಕಾಗಿ ಬೆಲೆ ತೆರಬೇಕಾಯಿತೇ ಸಂತ್ರಸ್ತೆ?

ಸುಪ್ರೀಂಕೋರ್ಟ್ ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಸಂತ್ರಸ್ತೆಯ ಕುಟುಂಬಕ್ಕೆ ಬೆದರಿಕೆಯೊಡ್ಡಿದ್ದಾರೆ ಎಂಬ ದೂರು ಬಗ್ಗೆ ಗುರುವಾರ ಸುಪ್ರೀಂಕೋರ್ಟ್‌ ಸ್ವಯಂಪ್ರೇರಿತ ವಿಚಾರಣೆ ನಡೆಸಿದ್ದು, ಉತ್ತರ ಪ್ರದೇಶ ಸರ್ಕಾರಕ್ಕೆ ಇದು ತೀವ್ರ ಮುಜುಗರವನ್ನುಂಟುಮಾಡಿದೆ.

ಇದನ್ನೂ ಓದಿಸಂತ್ರಸ್ತೆ ಇದ್ದ ಕಾರು ಅಪಘಾತ ‌| ಬಿಜೆಪಿ ಶಾಸಕನ ವಿರುದ್ಧ ಕೊಲೆ ಪ್ರಕರಣ ದಾಖಲು

ಉನ್ನಾವ್ ಅತ್ಯಾಚಾರ ಪ್ರಕರಣ ಸಂತ್ರಸ್ತೆ 4 ಕೇಸುಗಳನ್ನು ನೀಡಿದ್ದು, ಈಕೆಯ ಕುಟುಂಬಕ್ಕೂ ಬೆದರಿಕೆಯಿದೆ. ಹಾಗಾಗಿ ಈಕೆಯನ್ನು ಉತ್ತರ ಪ್ರದೇಶದಿಂದ ದೆಹಲಿಗೆ ಕರೆದೊಯ್ಯಬೇಕು ಎಂದು ಹೇಳಿದೆ.

ಅತ್ಯಾಚಾರ ಪ್ರಕರಣ ಬಗ್ಗೆ ಸಿಬಿಐ  ಕಳೆದ ಒಂದು ವರ್ಷದಿಂದ ನಡೆಸುತ್ತಿರುವ ತನಿಖೆಯ ವರದಿಯನ್ನು ಸಲ್ಲಿಸಬೇಕು ಮತ್ತು ಕಾರು ಅಪಘಾತದ ತನಿಖಾ ವರದಿಯನ್ನು ಒಂದು ವಾರದೊಳಗೆ ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ:
ನನ್ನ ಮನೆಗೆ ಬಂದು ಬೆದರಿಕೆಯೊಡ್ಡಿದ್ದರು: ಉನ್ನಾವ್ ಸಂತ್ರಸ್ತೆಯಿಂದ ಸಿಜೆಐಗೆ ಪತ್ರ
* ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕಾರು ಅಪಘಾತ ಪ್ರಕರಣದಲ್ಲಿ ಬಿಜೆಪಿ ಕೈವಾಡ? 
* ಅತ್ಯಾಚಾರ ಸಂತ್ರಸ್ತೆ ಕಾರಿಗೆ ಲಾರಿ ಡಿಕ್ಕಿ: ಅಪಘಾತವಲ್ಲ, ಕೊಲೆ ಪ್ರಕರಣ ದಾಖಲು

Post Comments (+)