ಶನಿವಾರ, ಜುಲೈ 24, 2021
27 °C

2,550 ವಿದೇಶಿ ತಬ್ಲಿಗಿ ಜಮಾತ್ ಸದಸ್ಯರಿಗೆ 10 ವರ್ಷ ಭಾರತ ಪ್ರವೇಶ ನಿಷೇಧ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಕಪ್ಪುಪಟ್ಟಿಗೆ ಸೇರಿರುವ 2,550 ವಿದೇಶಿ ತಬ್ಲಿಗಿ ಜಮಾತ್ ಸದಸ್ಯರಿಗೆ 10 ವರ್ಷ ಭಾರತ ಪ್ರವೇಶಿಸದಂತೆ ನಿಷೇಧಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಈ ಬಗ್ಗೆ ಮಾಹಿತಿ ನೀಡಿರುವ ಎಎನ್‌ಐ ಸುದ್ದಿ ಸಂಸ್ಥೆ, ತಬ್ಲಿಗಿ ಜಮಾತ್‌ನ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ 2,550 ಸದಸ್ಯರಿಗೆ ಹತ್ತು ವರ್ಷಗಳ ಕಾಲ ಭಾರತ ಪ್ರವೇಶಿಸದಂತೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದೆ. ನಿಷೇಧಕ್ಕೆ ಒಳಪಟ್ಟ ತಬ್ಲಿಗಿ ಜಮಾತ್‌ ಸದಸ್ಯರನ್ನು ಈಗಾಗಲೇ ಕಪ್ಪುಪಟ್ಟಿಗೆ ಸೇರಿಸಲಾಗಿತ್ತು. 

ಕಳೆದ ಏಪ್ರಿಲ್‌ನಲ್ಲಿ, ದೇಶದಾದ್ಯಂತ ದೃಢಪಟ್ಟಿದ್ದ ಸಾವಿರಾರು ಕೊರೊನಾ ವೈರಸ್ ಸೋಂಕು ಪ್ರಕರಣಗಳು ದೆಹಲಿಯ ನಿಜಾಮುದ್ದೀನ್‌ನ‌ ತಬ್ಲಿಗಿ ಜಮಾತ್‌ ಸಭೆಯಿಂದ ಹರಡಿರುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿತ್ತು.

ಇದನ್ನೂ ಓದಿ: ತಬ್ಲಿಗಿ ಜಮಾತ್ | ದೇಶದಾದ್ಯಂತ ಸುಮಾರು 7000 ಮಂದಿ ಪತ್ತೆಯೇ ಸವಾಲು

ಈ ಪ್ರಕರಣಗಳು ದೇಶದ 23 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಪಟ್ಟಿದ್ದವು. ಮಾರ್ಚ್‌ನಲ್ಲಿ ದೆಹಲಿಯ ನಿಜಾಮುದ್ದೀನ್‌ನ‌ ತಬ್ಲಿಗಿ ಜಮಾತ್‌ ಸಭೆಯಲ್ಲಿ ಹಲವು ದೇಶಗಳ ಪ್ರಜೆಗಳು ಭಾಗಿಯಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು